Bengaluru: ಮಹಾರಾಣಿ ಕಾಲೇಜು ಬಳಿಯ ಅಂಡರ್ಪಾಸ್ ನಲ್ಲಿ ಸಿಲುಕಿದ ಲಾರಿ, ಹೊರಗೆಳೆಯಲು ಪೊಲೀಸರಿಂದ ಹರಸಾಹಸ
ಮಳೆ ಬರಲಿ, ಬಾರದಿರಲಿ; ನಗರದಲ್ಲಿರುವ ಅಂಡರ್ಪಾಸ್ ಗಳು ನಾಗರಿಕರಿಗೆ ಸಮಸ್ಯೆ ಒಡ್ಡುತ್ತಿರುವುದು ಖೇದಕರ ಸಂಗತಿ.
ಬೆಂಗಳೂರು: ನಗರದಲ್ಲಿ ಇಂದು ಬೆಳಗ್ಗೆ ಮಹಾರಾಣಿ ಕಾಲೇಜು (Maharani College) ಬಳಿಯ ಅಂಡರ್ಪಾಸ್ (underpass) ಮೂಲಕ ಹಾದು ಆಫೀಸು, ಶಾಲಾ-ಕಾಲೇಜುಗಳಿಗೆ ಹೋಗುತ್ತಿದ್ದವರು ತಾವು ಎದ್ದ ಘಳಿಗೆಯನ್ನು ಶಪಿಸುತ್ತಿದ್ದರು. ಕಾರಣ ನಿಮಗೆ ವಿಡಿಯೋದಲ್ಲಿ ಕಾಣುತ್ತಿದೆ. ಮೈಸೂರು ಬ್ಯಾಂಕ್ ಕಡೆಯಿಂದ ಬಂದ ಲಾರಿಯೊಂದು (lorry) ಅಂಡರ್ಪಾಸ್ ನಲ್ಲಿ ಸಿಲುಕಿಕೊಂಡುಬಿಟ್ಟಿತ್ತು. ಅದನ್ನು ಅಲ್ಲಿಂದ ಹೊರತೆಗೆಯಲು ಸಂಚಾರಿ ಪೊಲೀಸರು ಹರಸಾಹಸ ಪಡಬೇಕಾಯಿತು. ಅಂಡರ್ ಪಾಸ್ ಬಳಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಪೊಲೀಸರು ವಾಹನ ಸವಾರರಿಗೆ ಬದಲೀ ರಸ್ತೆಗಳಿಂದ ಹೋಗುವಂತೆ ಹೇಳಿದರು. ಮಳೆ ಬರಲಿ, ಬಾರದಿರಲಿ; ನಗರದಲ್ಲಿರುವ ಅಂಡರ್ಪಾಸ್ ಗಳು ನಾಗರಿಕರಿಗೆ ಸಮಸ್ಯೆ ಒಡ್ಡುತ್ತಿರುವುದು ಖೇದಕರ ಸಂಗತಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
