ಚಿತ್ರರಂಗದ ನಂಟು ಇಲ್ಲದ ರಚನಾ ಇಂದರ್ ಬಣ್ಣದ ಲೋಕಕ್ಕೆ ಬಂದಿದ್ದು ಹೇಗೆ? ಎಲ್ಲವನ್ನೂ ವಿವರಿಸಿದ ನಟಿ
‘ಲವ್ 360’ ಚಿತ್ರದಿಂದ ನಟಿ ರಚನಾ ಇಂದರ್ ಅವರ ಜನಪ್ರಿಯತೆ ಹೆಚ್ಚಿದೆ. ತಾವು ಚಿತ್ರರಂಗಕ್ಕೆ ಬಂದಿದ್ದು ಹೇಗೆ ಎಂಬುದನ್ನು ಅವರು ವಿವರಿಸಿದ್ದಾರೆ.
ನಟಿ ರಚನಾ ಇಂದರ್ (Rachana Inder) ಅವರಿಗೆ ಚಿತ್ರರಂಗದಲ್ಲಿ ಒಳ್ಳೊಳ್ಳೆಯ ಅವಕಾಶಗಳು ಸಿಗುತ್ತಿವೆ. ‘ಲವ್ ಮಾಕ್ಟೇಲ್’ (Love Mocktail) ಸಿನಿಮಾದಿಂದ ಗೆಲುವು ಪಡೆದ ಅವರು ಈಗ ‘ಲವ್ 360’ (Love 360) ಚಿತ್ರದಲ್ಲೂ ಗಮನಾರ್ಹವಾಗಿ ನಟಿಸಿದ್ದಾರೆ. ಅವರ ಕುಟುಂಬದ ಬೇರೆ ಯಾರೂ ಚಿತ್ರರಂಗದಲ್ಲಿ ಇಲ್ಲ. ಬಣ್ಣದ ಲೋಕದ ಟಚ್ ಇಲ್ಲದ ಅವರು ಮೊದಲು ಮಾಡೆಲಿಂಗ್ ಮಾಡುತ್ತಿದ್ದರು. ಬಳಿಕ ನಟನೆಯಲ್ಲಿ ತರಬೇತಿ ಪಡೆದುಕೊಂಡರು. ಒಟ್ಟಾರೆ ತಾವು ಸಾಗಿಬಂದ ಹಾದಿ ಹೇಗಿತ್ತು ಎಂಬುದನ್ನು ಅವರು ಈ ವಿಡಿಯೋದಲ್ಲಿ ವಿವರಿಸಿದ್ದಾರೆ. ‘ಟಿವಿ9 ಕನ್ನಡ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ರಚನಾ ಇಂದರ್ ಮಾತನಾಡಿದ್ದಾರೆ.