ಬೆಂಗಳೂರಿನಲ್ಲಿ ಪಬ್ಗಳಿಗೂ ಸಿಲಿಂಡರ್ ಸಮಸ್ಯೆ: ಕೋಲಾರದಲ್ಲಿ ಹೋಟೆಲ್ ಗ್ರಾಹಕರಿಗೆ ಕಲ್ಯಾಣ ಮಂಟಪದ ಊಟ!

Edited By:

Updated on: Mar 17, 2026 | 2:11 PM

ಕರ್ನಾಟಕದಲ್ಲಿ ವಾಣಿಜ್ಯ LPG ಸಿಲಿಂಡರ್‌ಗಳ ತೀವ್ರ ಕೊರತೆ ಎದುರಾಗಿದೆ. ಎಂಟು ದಿನಗಳಿಂದ ಬಗೆಹರಿಯದ ಈ ಸಮಸ್ಯೆ ಬೆಂಗಳೂರಿನ ಪಬ್‌ಗಳಲ್ಲೂ ತಾಂಡವವಾಡಿದ್ದು, ಫೈರ್‌ಲೆಸ್ ಅಡುಗೆಗೆ ಮುಂದಾಗಿವೆ. ಕೋಲಾರದ ಹೋಟೆಲ್‌ಗಳೂ ಸೌದೆ ಒಲೆ, ಇದ್ದಿಲು ಒಲೆಗಳನ್ನು ಆಶ್ರಯಿಸಿದ್ದು, ಕೆಲವು ಹೋಟೆಲ್‌ಗಳು ಕಲ್ಯಾಣ ಮಂಟಪಗಳಲ್ಲಿ ಊಟ ತಯಾರಿಸುತ್ತಿವೆ.

ಬೆಂಗಳೂರು, ಕೋಲಾರ ಮಾರ್ಚ್ 17: ಕರ್ನಾಟಕದಲ್ಲಿ ವಾಣಿಜ್ಯ ಬಳಕೆಯ ಎಲ್​​ಪಿಜಿ ಸಿಲಿಂಡರ್‌ಗಳ ಕೊರತೆ ತೀವ್ರಗೊಂಡಿದ್ದು, ಕಳೆದ ಎಂಟು ದಿನಗಳಿಂದ ಈ ಸಮಸ್ಯೆ ಬಗೆಹರಿದಿಲ್ಲ. ಇದರ ಬಿಸಿ ಬೆಂಗಳೂರಿನಾದ್ಯಂತ ಪಬ್‌ಗಳಿಗೂ ತಟ್ಟಿದೆ. ವಿಶೇಷವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ ಪ್ರದೇಶಗಳಲ್ಲಿ, ಸಿಲಿಂಡರ್ ಕೊರತೆಯಿಂದ ಪಬ್​ಗಳ ಮಾಲಕರು ಕಂಗಾಲಾಗಿದ್ದಾರೆ. ಹಲವು ಪಬ್‌ಗಳಲ್ಲಿ ‘ಫೈರ್‌ಲೆಸ್ ಕುಕಿಂಗ್’ ಅಂದರೆ ಬೆಂಕಿ ಬಳಸದೆ ತಯಾರಿಸುವ ಸಲಾಡ್, ಹಣ್ಣುಗಳಂತಹ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ.

ಕೋಲಾರ ಜಿಲ್ಲೆಯಲ್ಲೂ ಹೋಟೆಲ್‌ಗಳು ಗ್ಯಾಸ್ ಸಿಲಿಂಡರ್ ಕೊರತೆಯಿಂದ ಪರದಾಡುತ್ತಿವೆ. ವಾಣಿಜ್ಯ ಸಿಲಿಂಡರ್ ಸಿಗದೆ ಇರುವ ಕಾರಣ ಪಂಚವಟಿಯಂತಹ ಹಳೆಯ ಹೋಟೆಲ್‌ಗಳು ಸೌದೆ ಒಲೆಯ ಮೊರೆ ಹೋಗಿವೆ. ಹೊಗೆಯ ಸಮಸ್ಯೆ, ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆ, ಮತ್ತು ಮೆನು ನಿರ್ಬಂಧಗಳಿಂದಾಗಿ ಹೋಟೆಲ್ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಹೋಟೆಲ್ ಸಿಬ್ಬಂದಿಯೂ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವು ಹೋಟೆಲ್​ಗಳು ಕಲ್ಯಾಣ ಮಂಟಪಗಳಲ್ಲಿ ಅಡುಗೆ ಮಾಡಿ ಹೋಟೆಲ್‌ಗಳಿಗೆ ತಂದು ಗ್ರಾಹಕರಿಗೆ ಬಡಿಸುವಂತಹ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Rajendra Simha BL

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More