ಮಗಳಿಗೆ ಇನ್ಸುಲಿನ್ ತರಲು ಹಣವಿಲ್ಲ, ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ

Updated on: Jul 11, 2025 | 11:07 AM

ಮಗಳಿಗೆ ಇನ್ಸುಲಿನ್(Insulin) ತರಲು ಹಣವಿಲ್ಲ, ವಿಡಿಯೋ ಮಾಡಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿ ಅಸಹಾಯಕ ತಂದೆಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೃತ ವ್ಯಕ್ತಿ ರಿಯಲ್ ಎಸ್ಟೇಟ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ, ಅದರಲ್ಲಿ ತಮ್ಮ ನೋವೆಲ್ಲಾ ಹಂಚಿಕೊಂಡು, ಬಳಿಕ ಸೆಕ್ಯುರಿಟಿ ಗಾರ್ಡ್​ ಬಳಿ ಇದ್ದ ಗನ್​ನಿಂದ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

ಉತ್ತರ ಪ್ರದೇಶ, ಜುಲೈ 11: ಮಗಳಿಗೆ ಇನ್ಸುಲಿನ್(Insulin) ತರಲು ಹಣವಿಲ್ಲ, ವಿಡಿಯೋ ಮಾಡಿ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿ ಅಸಹಾಯಕ ತಂದೆಯೊಬ್ಬರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೃತ ವ್ಯಕ್ತಿ ರಿಯಲ್ ಎಸ್ಟೇಟ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೂ ಮುನ್ನ ವಿಡಿಯೋ ಮಾಡಿ, ಅದರಲ್ಲಿ ತಮ್ಮ ನೋವೆಲ್ಲಾ ಹಂಚಿಕೊಂಡು, ಬಳಿಕ ಸೆಕ್ಯುರಿಟಿ ಗಾರ್ಡ್​ ಬಳಿ ಇದ್ದ ಗನ್​ನಿಂದ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

ಮಗಳು ಮಧುಮೇಹದಿಂದ ಬಳಲುತ್ತಿದ್ದಾಳೆ, ಆಕೆಗೆ ಇನ್ಸುಲಿನ್ ಖರೀದಿ ಮಾಡಲು ನನ್ನ ಬಳಿ ಹಣವಿಲ್ಲ ಎಂದು ಅಸಹಾಯಕ ತಂದೆ ಕಣ್ಣೀರಿಟ್ಟಿದ್ದಾರೆ.ಮೃತ ವ್ಯಕ್ತಿಯನ್ನು ಶಹಬಾಜ್ ಶಕೀಲ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಕೋಟಿಗಟ್ಟಲೆ ಸಾಲ ಮಾಡಿದ್ದು, ಅವರ ಆರ್ಥಿಕ ಅಷ್ಟೊಂದು ಚೆನ್ನಾಗಿರಲಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಸೆಕ್ಯುರಿಟಿ ಬಳಿ ಇದ್ದ ಗನ್ ಇವರ ಬಳಿ ಬಂದಿದ್ದು ಹೇಗೆ ಎಂಬುದು ಇನ್ನೂ ಪ್ರಶ್ನಾತೀತವಾಗಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ