Loading video

ಕರ್ನಾಟಕ ಬಂದ್: ವಿಜಯಪುರದಲ್ಲಿ ಇಲ್ಲ ಬೆಂಬಲ, ರಸ್ತೆಯಲ್ಲಿ ಎಂದಿನಂತೆ ಬಸ್ ಮತ್ತು ಆಟೋರಿಕ್ಷಾಗಳ ಸಂಚಾರ

|

Updated on: Mar 22, 2025 | 10:09 AM

Karnataka Bandh: ನಮ್ಮ ವರದಿಗಾರ ಬಸ್ ನಿಲ್ದಾಣದ ಮುಂದೆ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಆಟೋರಿಕ್ಷಾ ಚಾಲಕರನ್ನು ಮಾತಾಡಿಸಿದ್ದು, ಪ್ರತಿಭಟನೆ ಮಾಡಲು ಬಂದ್​ಗಳಿಗೆ ಕರೆ ನೀಡುವುದು ಸರಿಯಲ್ಲ, ದಿನದ ಸಂಪಾದನೆಯನ್ನು ನೆಚ್ಚಿಕೊಂಡು ನಡೆಸುವ ತಮ್ಮಂಥವರಿಗೆ ಬಹಳ ತೊಂದರೆಯಾಗುತ್ತದೆ ಎಂದು ಅವರು ಹೇಳುತ್ತಾರೆ. ಅವರು ಹೇಳುವುದರಲ್ಲಿ ಅರ್ಥ ಇಲ್ಲದಿಲ್ಲ.

ವಿಜಯಪುರ, 22 ಮಾರ್ಚ್​:  ಬೆಳಗಾವಿಯಲ್ಲಿ ಶಿವಸೇನೆ (Shiv Sena) ಮತ್ತು ಎಂಇಎಸ್ (MES) ಪುಂಡಾಟಿಕೆಯನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ವಿಜಯಪುರ ನಗರದಲ್ಲಿ ಬಂದ್ ಕರೆಗೆ ನೀರಸ ಪ್ರತಿಕ್ರಿಯೆ ಕಂಡುಬಂದಿದೆ. ನಗರದ ನಿವಾಸಿಗಳು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ನಮ್ಮ ವಿಜಯಪುರ ವರದಿಗಾರ ಹೇಳುತ್ತಾರೆ. ಕೆಎಸ್ಸಾರ್ಟಿಸಿ ಬಸ್​ಗಳು ಎಂದಿನಂತೆ ಓಡಾಡುತ್ತಿವೆ ಮತ್ತು ಆಟೋಗಳು ಸಹ ರಸ್ತೆಗಿಳಿದಿವೆ. ಅಂಗಡಿ ಮುಂಗಟ್ಟು ಹೋಟೆಲ್​ಗಳು ತಮ್ಮ ವಹಿವಾಟನ್ನು ಎಂದಿನಂತೆ ನಡೆಸಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಯಾರೇನೇ ಹೇಳಿದರೂ ಮಾರ್ಚ್​ 22ಕ್ಕೆ ಕರೆ ನೀಡಿರುವ ಕರ್ನಾಟಕ ಬಂದ್ ನಿಲ್ಲಿಸಲಾಗದು: ವಾಟಾಳ್ ನಾಗರಾಜ್