Lunar Eclipse Prediction: ಮೇ 16ರ ಸಂಪೂರ್ಣ ಚಂದ್ರಗ್ರಹಣದ ಪ್ರಭಾವ ನಿಮ್ಮ ರಾಶಿಯ ಮೇಲೆ ಏನಾಗಿರುತ್ತದೆ; ಡಾ ಎಸ್ ಕೆ ಜೈನ್ ವಿವರಿಸುತ್ತಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 10, 2022 | 6:55 PM

ಈ ವರ್ಷ ನವೆಂಬರ್ 8 ರಂದು ಸಾಯಂಕಾಲ 4:28ಕ್ಕೆ ಮತ್ತೊಮ್ಮೆ ಚಂದ್ರಗ್ರಹಣವಾಗಲಿದೆ. ಹಾಗಂತ ಹೆದರುವ ಅವಶ್ಯಕತೆಯಿಲ್ಲ, ದೇವರ ಧ್ಯಾನ ಮಾಡಿ, ಜಪತಪ ಮಾಡಿ ದೋಷಮುಕ್ತರಾಗಿ ಎಂಬ ಸಲಹೆಯನ್ನು. ಡಾ ಜೈನ್ ನೀಡುತ್ತಾರೆ.

ಮೇ 16 ರಂದು ಸಂಪೂರ್ಣ ಚಂದ್ರಗ್ರಹಣ (total lunar eclipse) ಆಗಲಿದೆ ಮತ್ತು ಅದು ಅಮೇರಿಕ, ಯುರೋಪ್, ಅಫ್ರಿಕಾ, ಏಷ್ಯಾ, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಹಾಗೂ ಅಂಟಾರ್ಟಿಕಾ ಭಾಗಗಳಲ್ಲಿ ಗೋಚರಿಸಲಿದೆ. ಖ್ಯಾತ ಜ್ಯೋತಿಷಿ (renowned astrologer) ಡಾ ಎಸ್ ಕೆ ಜೈನ್ (Dr SK Jain) ಅವರು ಈ ಬಾರಿಯ ಸಂಪೂರ್ಣ ಚಂದ್ರಗಹಣ ಮನುಕುಲ, ಸೃಷ್ಟಿ ಹಾಗೂ ಯಾವ್ಯಾವ ರಾಶಿಯ ಮೇಲೆ ಯಾವ ಪರಿಣಾಮ ಬೀರಲಿದೆ ಅಂತ ಇಲ್ಲಿ ಹೇಳಿದ್ದಾರೆ. ಸಂಪೂರ್ಣ ಚಂದ್ರಗ್ರಹಣ ಮೇ 16 ಸೋಮವಾರ ಬೆಳಗ್ಗೆ 8 ಗಂಟೆಯಿಂದ ಬೆಳಗ್ಗೆ 11 ಗಂಟೆಯವರೆಗೆ ಆಗಲಿದೆ. ಗ್ರಹಣದ ತೀವ್ರತೆ 9:39 ಕ್ಕೆ ಸಂಭವಿಸಲಿದೆ ಎಂದು ಡಾ ಜೈನ್ ಹೇಳುತ್ತಾರೆ. ಗ್ರಹಣ ನಮ್ಮ ಮನಸ್ಸುಗಳ ಮೇಲೆ ಪ್ರಭಾವ ಬೀರುವುದರಿಂದ ನವಗ್ರಹಗಳ ಮಂತ್ರ ಪಠಿಸಬೇಕು ಎಂದು ಅವರು ಹೇಳುತ್ತಾರೆ. ಈ ಸಂದರ್ಭದಲ್ಲಿ ರಾಜಕೀಯ ಬದಲಾವಣೆಗಳು ಘಟಿಸುತ್ತವೆ.

ಈ ವರ್ಷ ನವೆಂಬರ್ 8 ರಂದು ಸಾಯಂಕಾಲ 4:28ಕ್ಕೆ ಮತ್ತೊಮ್ಮೆ ಚಂದ್ರಗ್ರಹಣವಾಗಲಿದೆ. ಹಾಗಂತ ಹೆದರುವ ಅವಶ್ಯಕತೆಯಿಲ್ಲ, ದೇವರ ಧ್ಯಾನ ಮಾಡಿ, ಜಪತಪ ಮಾಡಿ ದೋಷಮುಕ್ತರಾಗಿ ಎಂಬ ಸಲಹೆಯನ್ನು. ಡಾ ಜೈನ್ ನೀಡುತ್ತಾರೆ.

ಬೇರೆ ಬೇರೆ ರಾಶಿಫಲಗಳ ಮೇಲೆ ಚಂದ್ರಗ್ರಹಣದ ಪ್ರಭಾವ ಹೇಗಿರುತ್ತದೆ ಅಂತ ಡಾ ಜೈನ್ ಹೇಳುತ್ತಾರೆ.

ಮೇಷ ರಾಶಿ: ಮೇಷ ರಾಶಿಯವರಿಗೆ ಎರಡು ದಿನ ಸಂಕಟವಿದೆ ಅಂದರೆ ದೋಷಕರ ದಿನಗಳು. ಆದರೆ ಆ ಸಂಕಟ ಕಳೆದ ಬಳಿಕ ಶುಭವಾಗುತ್ತದೆ. ಸರ್ಪಶಾಂತಿ ಮಾಡಿಸಿಕೊಳ್ಳುವುದು ಒಳ್ಳೆಯದು. ಕನಸಿಲ್ಲಿ ಹಾವು ಬಂದರೆ ಯಾವ ಕಾರಣಕ್ಕೂ ಹೆದರಬೇಡಿ. ಶನಿ ಬಲವಿದೆ, ಆರ್ಥಿಕ ಅಭಿವೃದ್ಧಿಯಾಗುತ್ತದೆ. ಈ ರಾಶಿಯವರು ಧ್ಯಾನ ಮಾಡಿಕೊಂಡಿರಬೇಕು ಎಂದು ಡಾ ಜೈನ್ ಹೇಳುತ್ತಾರೆ.

ವೃಷಭ ರಾಶಿ: ವೃಷಭ ಸಂಕ್ರಮಣ, ಗುರುಬಲವಿದೆ, ವಿವಾಹ ಕಾರ್ಯಗಳು ನಡೆದರೆ ತುಂಬಾ ಶುಭವಾಗುತ್ತದೆ. ವೃಷಭ ಮಾಸದಲ್ಲಿ ಮುಂಗಾರು ಮಳೆಯಾಗುತ್ತದೆ. ಹಲವು ಕಡೆ ಅತಿವೃಷ್ಟಿ, ಹಲವು ಭಾಗಗಳಲ್ಲಿ ಅನಾವೃಷ್ಟಿ. ಬೆಂಕಿಯಿಂದ ತೊಂದರೆ ಯಾಕೆಂದರೆ, ಕುಜ ಶನಿ ರಾಶಿಯನ್ನು ಬಿಟ್ಟು ಮೀನ ರಾಶಿ ಪ್ರವೇಶ ಮಾಡುತ್ತಾನೆ. ಆರ್ಥಿಕ ವೃದ್ಧಿಯಾಗುತ್ತದೆ, ಗುರುಬಲವಿದೆ ಮತ್ತು ಆಕಾಂಕ್ಷೆಗಳು ಪೂರ್ಣಗೊಳ್ಳುತ್ತವೆ. ಸರ್ಕಾರಿ ಕೆಲಸ ಸಿಗುತ್ತದೆ, ಸಿನಿಮಾಗಳಿಗೆ ಬಹಳ ಒಳ್ಳೆ ಸಮಯ. ಈ ರಾಶಿಯವರು ಮಣ್ಣು ಹಿಡಿದರೂ ಬಂಗಾರವಾಗುತ್ತದೆ. ಮೀನು ಹಿಡಿಯುವವರ ಸಮುದ್ರಕ್ಕಿಳಿಯುವ ಸಾಹಸ ಮಾಡಬಾರದು.

ಮಿಥುನ ರಾಶಿ: ಎರಡು ದಿನ ಸಂಕಟ, ಕಲಹ ಚಿಂತೆ. ಯಾವ ತಪ್ಪು ಮಾಡದಿದ್ದರೂ ಪ್ರಮಾದ, ಅಪವಾದ ಮೈಮೇಲೆ ಬರುತ್ತದೆ. ಜಪತಪ ಜಾಸ್ತಿ ಮಾಡಬೇಕು. ರೈತರಿಗೆ ಒಳ್ಳೆಯ ಸಮಯ. ಅವಳಿ ಮಕ್ಕಳು ಜನಿಸಿದರೆ ಒಳ್ಳೆಯದಾಗುತ್ತದೆ. ಕಂಪ್ಯೂಟರ್ ಲೈನ್ ನಲ್ಲಿ ಕೆಲಸ ಮಾಡುವವರಿಗೆ ಉತ್ತಮ ಯೋಗ. ಎಮ್ ಬಿ ಎ, ಎಮ್ ಸಿಎ ಮಾಡುವುದು ಒಳ್ಳೆಯದು, ಸಿಎ ಮಾಡಬಾರದು. ಗುರುಬಲ ಸ್ವಸ್ಥಾನದಲ್ಲಿದೆ.

ಕಟಕ ರಾಶಿ: ಬಹಳ ಶುಭವಾಗಲಿದೆ, ಭಾಗ್ಯೋದಯ, ಗ್ರಹಣದ ನಂತರ ಹೊಸ ಯೋಚನೆಗಳನ್ನು ಶುರುವಿಟ್ಟುಕೊಳ್ಳಿ. ತಪ್ಪು ಲೆಕ್ಕಾಚಾರಗಳು ಸಲ್ಲದು, ಅದರಿಂದಾಗೇ ಸೀತಾರಾಮ ಕೇಸರಿ ಪ್ರಧಾನ ಮಂತ್ರಿಯಾಗಲಿಲ್ಲ. ಯೋಗ ಇದ್ದವರು ಮಾತ್ರ ಪ್ರಧಾನ ಮಂತ್ರಿಯಾಗುತ್ತಾರೆ, ಎಚ್ ಡಿ ದೇವೇಗೌಡ ಅವರಿಗೆ ಆ ಯೋಗ ಇತ್ತು. ರಾಜಕಾರಣಿಗಳಿಗೆ, ನೀರನಲ್ಲಿ ಕೆಲಸ ಮಾಡುವವರಿಗೆ ಯೋಗವಿದೆ. ಕರ್ಕ ರಾಶಿಯಲ್ಲಿ ಪಾಪ ಕಳೆದರೆ ಹಾರ್ಟ್ ಅಟ್ಯಾಕ್ ಆಗುತ್ತದೆ.

ಸಿಂಹ ರಾಶಿ: ಗ್ರಹಣ ಸಮಯದಲ್ಲಿ ದೋಷವಿದೆ. ನಿಮ್ಮ ಆಕಾಂಕ್ಷೆಗಳು ನೆರವೇರುತ್ತವೆ. ಇನ್ನೂ ಎರಡು ಚಂದ್ರಗ್ರಹಣಗಳಿವೆ, ಶಾಂತಿ ಮಾಡಿಸಿಕೊಳ್ಳಿ. ಶುಕ್ರಬಲ ಬರುತ್ತದೆ, ಸಂತಾನ ಸುಖವಿದೆ. ಶನಿ ಶಾಂತಿ ಮಾಡಿಸಿಕೊಳ್ಳಿ.

ಕನ್ಯಾ ರಾಶಿ: ಬಹಳ ಶುಭದಿನ, ಗುರುಬಲವಿದೆ, ರೋಗಹರಣವಾಗುತ್ತದೆ. 9ನೇ ಸ್ಥಾನದಲ್ಲಿ ಬುಧನ ಬಲವಿದೆ 8ರಲ್ಲಿ ರಾಹು ಇದೆ. ಕಣ್ಣಿನ ಸಮಸ್ಯೆ ಇರುವವರು ವಿಟಮಿನ್ ಸಿ ಮತ್ತು ಚ್ಯವನಪ್ರಾಶ ಸೇವಿಸಬೇಕು.

ತುಲಾ ರಾಶಿ: ಕೇತು ಇದೆ. ಪಂಚಮಶನಿ ಚತುಶ್ಶನಿ ಮುಗಿದು ಹೋಗಿದೆ. ಗಂಭೀರ ಸಮಯ ಎದುರಾಗುತ್ತದೆ. ಆಷಾಢ ಮಾಸದ ನಂತರ ನಿಮಗೆ ಶುಭವಾಗುತ್ತದೆ.

ವೃಶ್ಛಿಕ ರಾಶಿ: ಅದ್ಭುತ ಯೋಗ, ಗಜಕೇಸರಿ ಯೋಗ, ಗ್ರಹಣ ಬಹಳ ಶುಭಕರ, ಜಪತಪ ಮಾಡಿ, ಯಜ್ಞಗಳನ್ನು ಮಾಡಿಸಿ.

ಧನು ರಾಶಿ: ಗುರುಬಲವಿದೆ, ಶುಭವಾಗುತ್ತದೆ ಮತ್ತು ಲಾಭದಾಯಕ. ಎರಡು ದಿನಗಳ ಕಷ್ಟ ನಷ್ಟವಿದೆ. ಮೂಲ ನಕ್ಷತ್ರ ಹೋಗಲಿ, ಎರಡು ದಿನಗಳ ನಂತರ ಭ್ಯಾಗ್ಯೋದಯ, ಲಾಭ.

ಮಕರ ರಾಶಿ: ಬಹಳ ಲಾಭ, ಬಾಗ್ಯೋದಯ. ಸಂಕಟ ದೂರವಾಗುತ್ತದೆ, ಫಲ ಬರುತ್ತದೆ. ಹನುಮಾನ್ ಚಾಲೀಸಾ ಓದಿ, ಶಾಂತಿ ಮಾಡಿಸಿ.

ಕುಂಭ ರಾಶಿ: ಎರಡು ದಿನ ಕಳೆಯಲಿ, 4 ದಿನಗಳ ಕಾಲ ದೇವಿ ಪೂಜೆ ಮಾಡಿಸಿ. ಜಪತಪ ಮಾಡಿ, ಶುಭವಾಗುತ್ತದೆ.

ಮೀನ ರಾಶಿ: ಭಾಗ್ಯಸ್ಥಾನದಲ್ಲಿ ಚಂದ್ರ ಪ್ರದೇಶ, ಶನಿ ಶಾಂತಿ ಮಾಡಿಸಿಕೊಳ್ಳಿ. 8 ನೇ ಮನೆಯಲ್ಲಿ ಕೇತು ಇದ್ದಾನೆ. ಜಾತಕವನ್ನು ಒಮ್ಮೆ ನೋಡಿಸಿಕೊಳ್ಳಿ. ರಾಹು ಕೇತು ಅರ್ಥ ಮಾಡಿಕೊಂಡು ಶಾಂತಿ ಮಾಡಿಸಿಕೊಳ್ಳಿ. ಗುರು ಸ್ವಸ್ಥಾನದಲ್ಲಿದ್ದಾನೆ. ದಶೆ ಚೆನ್ನಾಗಿದೆ.

ಇದನ್ನೂ ಓದಿ:    Solar Eclipse 2022: ಸೂರ್ಯಗ್ರಹಣದ ಸಂದರ್ಭದಲ್ಲಿ ಏನು ಮಾಡಬೇಕು? ಏನು ಮಾಡಬಾರದು?