‘ಸಿನಿಮಾ ರಿಲೀಸ್ ಬಗ್ಗೆ ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ’; ಮನು ಪತ್ನಿ ಬೇಸರ
ಮಡೆನೂರು ಮನು ಅವರು ಈಗ ಜೈಲಿನಲ್ಲಿ ಇದ್ದಾರೆ. ಅವರ ಮೇಲೆ ಅತ್ಯಾಚಾರ ಕೇಸ್ ದಾಖಲಾಗಿದೆ. ಈ ಕೇಸ್ನಿಂದ ಅವರಿಗೆ ಸಂಕಷ್ಟ ಹೆಚ್ಚಿದೆ. ಅವ ನಟನೆಯ ಮೊದಲ ಸಿನಿಮಾ ರಿಲೀಸ್ ಆಗುವುದರಲ್ಲಿತ್ತು. ಆದರೆ, ಹಾಗಗಲೇ ಇಲ್ಲ. ಈಗ ಮಡೆನೂರು ಮನು ಪತ್ನಿ ದಿವ್ಯಾ ಮಾತನಾಡಿದ್ದಾರೆ.
ಮಡೆನೂರು ಮನು (Madenuru Manu) ಅವರು ಅತ್ಯಾಚಾರ ಕೇಸ್ನಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಸಹ ಕಲಾವಿದೆ ಅತ್ಯಾಚಾರ ಆರೋಪ ಹೊರಿಸಿದ್ದಾರೆ. ಈ ಆರೋಪದ ಬಗ್ಗೆ ಅವರ ಪತ್ನಿ ದಿವ್ಯಾ ಮಾತನಾಡಿದ್ದಾರೆ. ‘ಪತಿ ನನ್ನ ಬಳಿ ಏನೂ ಹೇಳಿಲ್ಲ. ಅವರ ವಿರುದ್ಧದ ಆರೋಪ ಸುಳ್ಳು. ಅವರು ಮೊದಲ ಸಿನಿಮಾ ಬಗ್ಗೆ ಸಾಕಷ್ಟು ಕನಸು ಕಂಡಿದ್ದರು. ಆದರೆ, ಮೊದಲ ದಿನದ ಶೋಗೆ ಅವರಿಲ್ಲ. ಅವರು ಜೈಲಿನಲ್ಲಿದ್ದಾರೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
