Video: ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಯನ್ನು ಎಳೆದು ಕಪಾಳಮೋಕ್ಷ ಮಾಡಿದ ಐಎಎಸ್ ಅಧಿಕಾರಿ
ಐಎಎಸ್ ಅಧಿಕಾರಿಯೊಬ್ಬರು ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಎಳೆದು ಕಪಾಳಮೋಕ್ಷ ಮಾಡಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏಪ್ರಿಲ್ 1 ರಂದು ದೀನದಯಾಳ್ ದಂಗ್ರೌಲಿಯಾ ಮಹಾವಿದ್ಯಾಲಯದಲ್ಲಿ ನಡೆದ ಈ ಘಟನೆ ಇದು. ತುಂಬಿದ್ದ ತರಗತಿಯಲ್ಲಿ ವಿದ್ಯಾರ್ಥಿಯನ್ನು ಕುರ್ಚಿಯಿಂದ ಎಳೆದು ಹೊಡೆದಿದ್ದಾರೆ. ಬಿಎಸ್ಸಿಯ ಎರಡನೇ ವರ್ಷದ ಗಣಿತ ಪರೀಕ್ಷೆ ವೇಳೆ ತಪಾಸಣೆಗೆಂದು ಸಂಜೀವ್ ರಾಥೋಡ್ ಹೋಗಿದ್ದರು.
ಭಿಂಡ್, ಜುಲೈ 13: ಐಎಎಸ್ ಅಧಿಕಾರಿಯೊಬ್ಬರು ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಯೊಬ್ಬನನ್ನು ಎಳೆದು ಕಪಾಳಮೋಕ್ಷ ಮಾಡಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏಪ್ರಿಲ್ 1 ರಂದು ದೀನದಯಾಳ್ ದಂಗ್ರೌಲಿಯಾ ಮಹಾವಿದ್ಯಾಲಯದಲ್ಲಿ ನಡೆದ ಈ ಘಟನೆ ಇದು. ತುಂಬಿದ್ದ ತರಗತಿಯಲ್ಲಿ ವಿದ್ಯಾರ್ಥಿಯನ್ನು ಕುರ್ಚಿಯಿಂದ ಎಳೆದು ಹೊಡೆದಿದ್ದಾರೆ. ಬಿಎಸ್ಸಿಯ ಎರಡನೇ ವರ್ಷದ ಗಣಿತ ಪರೀಕ್ಷೆ ವೇಳೆ ತಪಾಸಣೆಗೆಂದು ಸಂಜೀವ್ ರಾಥೋಡ್ ಹೋಗಿದ್ದರು.
ರೋಹಿತ್ ರಾಥೋಡ್ ಎಂದು ಗುರುತಿಸಲಾದ ವಿದ್ಯಾರ್ಥಿಯನ್ನು ಎಂಬ ವಿದ್ಯಾರ್ಥಿಯನ್ನು ಥಳಿಸಿ ಕಪಾಳಮೋಕ್ಷ ಮಾಡುತ್ತಾರೆ. ಅಧಿಕಾರಿ ಕ್ರಮವನ್ನು ಸಮರ್ಥಿಸಿಕೊಂಡರು, ಪರೀಕ್ಷಾ ಹಗರಣ ನಡೆಯುತ್ತಿದೆ ಎಂದು ಹೇಳಿದ್ದು, ಕಾಪಿ ಹೊಡೆಯುತ್ತಿದ್ದ ಹಾಗಾಗಿ ಹೊಡೆದಿದ್ದೇನೆ ಎಂದು ಹೇಳಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ