ಓಪನ್ ಆಗಿ ಹೇಳ್ತೀನಿ, ಏನು ಬೇಕಾದ್ರೂ ಟ್ರೋಲ್ ಮಾಡಿಕೊಳ್ಳಿ: ಜೋಗಿ ಪ್ರೇಮ್
‘ಜೋಗಿ’ ಪ್ರೇಮ್ ಅವರು ಧ್ರುವ ಸರ್ಜಾ ನಟನೆಯ ‘ಕೆಡಿ: ದಿ ಡೆವಿಲ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೇಮ್ ಅವರು ಮಾತನಾಡಿದರು. ತಮ್ಮನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುವವರಿಗೆ ಪ್ರೇಮ್ ಅವರು ಖಡಕ್ ತಿರುಗೇಟು ನೀಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..
ಜೋಗಿ ಪ್ರೇಮ್ ಅವರು ‘ಕೆಡಿ: ದಿ ಡೆವಿಲ್’ (KD The Devil) ಸಿನಿಮಾಗೆ ನಿರ್ದೇಶನ ಮಾಡಿದ್ದು, ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ಟ್ರೋಲ್ (Troll) ಮಾಡುವವರಿಗೆ ಪ್ರೇಮ್ ಖಡಕ್ ತಿರುಗೇಟು ನೀಡಿದ್ದಾರೆ. ‘ನಾನು ಹಾಡುವಾಗ ಕೆಲವರು ನನ್ನನ್ನು ಟ್ರೋಲ್ ಮಾಡಿದರು. ನಾನು ಹಳ್ಳಿಯವನು. ಸ್ಪಷ್ಟತೆ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಸಂಗೀತ ಗೊತ್ತಿಲ್ಲ. ಹಾಡು ಕೇಳುವವನ ಹೃದಯಕ್ಕೆ ನೇರವಾಗಿ ಮುಟ್ಟಬೇಕು ಅಷ್ಟೇ. ನಾನು ಓಪನ್ ಆಗಿ ಹೇಳ್ತೀನಿ. ಯಾರು ಏನು ಬೇಕಾದರೂ ಟ್ರೋಲ್ ಮಾಡಿಕೊಳ್ಳಲಿ’ ಎಂದು ಪ್ರೇಮ್ (Jogi Prem) ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

