ನುರಿತ ಡ್ಯಾನ್ಸರ್ ಗಳನ್ನೂ ನಾಚಿಸುವಂತೆ ಕುಣಿದ ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ; ವಿಡಿಯೋ ವೈರಲ್
ಆಚರಣೆ ಅಂದಮೇಲೆ ಹಾಡು ಕುಣಿತ ಇಲ್ಲದಿರುತ್ತದೆಯೇ? ಪೌರ ಕಾರ್ಮಿಕರ ಜೊತೆ ಬಾಲಕೃಷ್ಣ ಅವರು ‘ದಳಪತಿ’ ಮೂವೀಯಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ಜೊತೆ ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಕುಣಿದ ಹಾಗೆ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು! ಕೆಲ ಮಹಿಳೆಯರು ಸಹ ಶಾಸಕನ ಜೊತೆ ಕುಣಿಯುವುದನ್ನು ನೋಡಹುದು.
ರಾಮನಗರ: ಮಾಗಡಿಯ ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ (HC Balakrishna) ರಾಜಕಾರಣಕ್ಕೆ ಬರದಿದ್ದರೆ ಸಿನಿಮಾ ಕ್ಷೇತ್ರದಲ್ಲ್ಲಿ ಮಿಂಚುತ್ತಿದ್ದರು! ಅವರ ಕುಣಿತ ನೋಡಿದರೆ ನೀವು ಸಹ ಈ ಮಾತನ್ನು ಒಪ್ಪುತ್ತೀರಿ. ವಿಷಯವೇನೆಂದರೆ, ಇಂದು ಬಿಡದಿಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಯೋಜಿಸಲಾಗಿತ್ತು ಮತ್ತು ಎಂಎಲ್ ಎ ಸಾಹೇಬರನ್ನು ಮುಖ್ಯ ಆತಿಥಿಗಳಾಗಿ (chief guest) ಕರೆಯಲಾಗಿತ್ತು. ಆಚರಣೆ ಅಂದಮೇಲೆ ಹಾಡು ಕುಣಿತ ಇಲ್ಲದಿರುತ್ತದೆಯೇ? ಪೌರ ಕಾರ್ಮಿಕರ ಜೊತೆ ಬಾಲಕೃಷ್ಣ ಅವರು ‘ದಳಪತಿ’ ಮೂವೀಯಲ್ಲಿ ಸೂಪರ್ ಸ್ಟಾರ್ ರಜನೀಕಾಂತ್ ( Rajinikanth) ಜೊತೆ ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ (Mammootty) ಕುಣಿದ ಹಾಗೆ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು! ಕೆಲ ಮಹಿಳೆಯರು ಸಹ ಶಾಸಕನ ಜೊತೆ ಕುಣಿಯುವುದನ್ನು ನೋಡಹುದು. ಪೌರ ಕಾರ್ಮಿಕರು ಹಸಿರು ಅಂಗಿ ಮತ್ತು ಬಿಳಿಪಂಚೆ ತೊಟ್ಟು ಬಾಲಕೃಷ್ಣ ಜೊತೆ ಕುಣಿದರು. ಬಿಡದಿಯ ಪುರಸಭೆಅ ಅಧಿಕಾರಿಗಳು ತಮ್ಮ ಕಾಲಿಗಳನ್ನು ಟ್ವಿಸ್ಟ್ ಮಾಡಿದರು ಅನಿಸುತ್ತೆ. ಶಾಸಕರು ಪೌರ ಕಾರ್ಮಿಕರ ಸಂಭ್ರಮದಲ್ಲಿ ಪಾಲ್ಗೊಂಡು ಅವರೊಂದಿಗೆ ಕುಣಿದಿದ್ದು ಶ್ಲಾಘನೀಯ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ