ಬೆಂಗಳೂರು: ಅರಮನೆಯಂಥ ಮನೆ ಕಟ್ಟಿಸಿರುವ ಮಹದೇವಪುರ ವಲಯದ ಆರ್ ಐ ಲೋಕಾಯುಕ್ತ ದಾಳಿ ನಡೆದಿರದಿದ್ದರೆ ವಿಜಯ್ ಮಲ್ಯಗೆ ಸೆಡ್ಡು ಹೊಡೆಯುತ್ತಿದ್ದ!

ಅರುಣ್​ ಕುಮಾರ್​ ಬೆಳ್ಳಿ

Updated on: Aug 17, 2023 | 11:43 AM

Lokayukta Raids: ಈತನಿಗೆ ಗಿರಿನಗರ ಮತ್ತು ಆವಲಹಳ್ಳಿಯಲ್ಲಿ ಮನೆಗಳಿವೆ. ವಿಡಿಯೋದಲ್ಲಿ ಕಾಣುತ್ತಿರೋದು ಗಿರಿನಗರದಲ್ಲಿರುವ ಮನೆ. ತನ್ನ ಸಂಪಾದನೆಗೆ ತಕ್ಕಂಥ ಹೆಸರನ್ನೇ ಮನೆಗಿಟ್ಟಿದ್ದಾನೆ-ಬಂಗಾರಗಿರಿ! ನಟರಾಜ ಕೆಲಸ ಮಾಡುವ ಜಾಗ ಬಂಗಾರದ ಖನಿ!!

ಬೆಂಗಳೂರು: ಮದ್ಯ ದೊರೆ (ಲಿಕ್ಕರ್ ಬ್ಯಾರನ್) ವಿಜಯ್ ಮಲ್ಯ (liquor baron Vijay Mallya) ಈ ಮನೆ ಕಟ್ಟಿಸಿ ವಿದೇಶಕ್ಕೆ ಪಲಾಯನಗೈದಿರಬಹದೆಂದು ನೀವು ಭಾವಿಸಿದ್ದರೆ ನಿಮ್ಮ ಎಣಿಕೆ ತಪ್ಪು ಮಾರಾಯ್ರೇ. ಇದು ಬಿಬಿಎಂಪಿ ಮಹಾದೇವಪುರ ವಲಯ ಕಚೇರಿಯಲ್ಲಿ ರೆವೆನ್ಯೂ ಇನ್ಸ್ಪೆಕ್ಟರ್ (ಆದಾಯ ನಿರೀಕ್ಷಕ) (revenue inspector) ಆಗಿ ಕೆಲಸ ಮಾಡುವ ಮತ್ತು ಕಚೇರಿಗೆ ದಕ್ಕಬೇಕಿರುವ ಅದಾಯವನ್ನೆಲ್ಲ ಪೋಲಾಗಿದರಲೆಂದು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುವ ನಟರಾಜ್ (Nataraj) ಮನೆ. ಇನ್ನೆರಡು ವರ್ಷ ಈ ಮಹಾಶಯನನ್ನು ಹಾಗೆಯೇ ಬಿಟ್ಟಿದ್ದರೆ ಮಲ್ಯನಿಗೆ ಸೆಡ್ಡು ಹೊಡೆಯುತ್ತಿದ್ದ. ಈತನಿಗೆ ಗಿರಿನಗರ ಮತ್ತು ಆವಲಹಳ್ಳಿಯಲ್ಲಿ ಮನೆಗಳಿವೆ. ವಿಡಿಯೋದಲ್ಲಿ ಕಾಣುತ್ತಿರೋದು ಗಿರಿನಗರದಲ್ಲಿರುವ ಮನೆ. ತನ್ನ ಸಂಪಾದನೆಗೆ ತಕ್ಕಂಥ ಹೆಸರನ್ನೇ ಮನೆಗಿಟ್ಟಿದ್ದಾನೆ-ಬಂಗಾರಗಿರಿ! ನಟರಾಜ ಕೆಲಸ ಮಾಡುವ ಜಾಗ ಬಂಗಾರದ ಖನಿ!! ಲೋಕಾಯುಕ್ತ ಆಧಿಕಾರಿಗಳು ಪ್ರತಿದಿನ ಸರ್ಕಾರಿ ನೌಕರರ ಮನೆಗಳ ಮೇಲೆ ದಾಳಿ ನಡೆಸಿದರೆ, ಹಲವಾರು ನೌಕರರು ಸಿಕ್ಕಿಬಿದ್ದು ಕಾರ್ಯಾಂಗದಲ್ಲಿ ಕೆಲಸ ಮಾಡುವವರ ಕೊರತೆ ತಲೆದೋರುತ್ತದೆ! ಇದು ಸತ್ಯ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.