ಬಿಬಿಎಂಪಿ ಲ್ಯಾಬ್ನಲ್ಲಿ ಬೆಂಕಿ ಪ್ರಕರಣ: ತನಿಖಾ ವರದಿ ಸಲ್ಲಿಸಲು ಡೆಡ್ಲೈನ್, 5 ದಿನಗಳ ಬಳಿಕ ಲ್ಯಾನ್ ಓಪನ್
ಬಿಬಿಎಂಪಿ ಕೇಂದ್ರ ಕಚೇರಿಯ ಗುಣಮಟ್ಟ ನಿಯಂತ್ರಣ ಲ್ಯಾಬ್ನಲ್ಲಿ ಸಂಭವಿಸಿದ ಅಗ್ನಿ ಅನಾಹುತ 9 ಮಂದಿ ಪಾಲಿಗೆ ಕಂಟಕ ತಂದಿದ್ದು, ಈ ಪ್ರಕರಣದ ಹಿಂದೆ ಹಲವು ಅನಾಮನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಗೆ ತಂಡ ರಚಿಸಲಾಗಿದ್ದು, ಆಗಸ್ಟ್ 30ರೊಳಗೆ ವರದಿ ಸಲ್ಲಿಸಲು ಡೆಡ್ಲೈನ್ ನೀಡಲಾಗಿದೆ. ಹೀಗಾಗಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಬೆಂಗಳೂರು, (ಆಗಸ್ಟ್ 16): ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ(BBMP) ಸಂಭವಿಸಿದ ಅಗ್ನಿ ಅವಘಡ(FIre) ಪ್ರಕರಣವನ್ನು ಜನ ಬಿಬಿಎಂಪಿಯನ್ನ ಅನುಮಾನದಿಂದಲೇ ನೋಡುವಂತಾಗಿದೆ. ಅಗ್ನಿ ಅನಾಹುತದ ಬಿಬಿಎಂಪಿಯ ಅದ್ವಾನ, ಎಡವಟ್ಟುಗಳ ಸಾಲಿಗೆ ಮತ್ತಷ್ಟು ಸಂಗತಿಗಳನ್ನ ಬಯಲು ಮಾಡಿದೆ. ಬಿಬಿಎಂಪಿ ಕೇಂದ್ರ ಕಚೇರಿಯ ಗುಣಮಟ್ಟ ನಿಯಂತ್ರಣ ಲ್ಯಾಬ್ನಲ್ಲಿ ಸಂಭವಿಸಿದ ಅಗ್ನಿ ಅನಾಹುತ 9 ಮಂದಿ ಪಾಲಿಗೆ ಕಂಟಕ ತಂದಿದೆ. ಆಸ್ಪತ್ರೆಯಲ್ಲಿ ಗಾಯಾಳುಗಳ ನರಳಾಟ ಹೇಳತೀರದಾಗಿದೆ. ಈ ಮಧ್ಯೆ ಇಂಥಾದ್ದೊಂದು ಬೆಂಕಿ ಅನಾಹುತಕ್ಕೆ ಕಾರಣ ಏನು ಎನ್ನುವುದನ್ನು ಪತ್ತೆ ಮಾಡಲು ತಂಡ ರಚನೆ ಮಾಡಲಾಗಿದ್ದು, ತನಿಖಾ ವರದಿ ಸಲ್ಲಿಸಲು ಡೆಡ್ಲೈನ್ ನೀಡಲಾಗಿದೆ. ಇದೇ ತಿಂಗಳ ಅಂದರೆ ಆಗಸ್ಟ್ 30ರೊಳಗೆ ಬಿಬಿಎಂಪಿ ಪ್ರಮುಖ ಇಂಜಿನಿಯರ್ ಪ್ರಹ್ಲಾದ್ ಅವರು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ವರದಿ ನೀಡಬೇಕು. ಹೀಗಾಗಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಆಗಸ್ಟ್ 11ರಂದು ಅಗ್ನಿ ದುರಂತ ಸಂಭವಿಸಿದ್ದು, ಅಂದಿನಿಂದ ಕ್ಲೋಸ್ ಆಗಿದ್ದ ಲ್ಯಾಬ್ ಕೀ ಇಂದು (ಆಗಸ್ಟ್ 16) ಕೊಡಲಾಗಿದ್ದು, ಬಿಬಿಎಂಪಿ ಚೀಫ್ ಎಂಜಿನಿಯರ್ ಪ್ರಹ್ಲಾದ್ ಅವರು ಅಗ್ನಿ ಅವಘಡ ಸಂಭವಿಸಿದ್ದ ಲ್ಯಾಬ್ ಒಪನ್ ಮಾಡಿ ಪರಿಶೀಲನೆ ನಡೆಸಿದರು. ಟೆಕ್ನಿಕಲ್ ತಂಡ ಲ್ಯಾಬ್ ಪರಿಶೀಲನೆ ನಡೆಸಿದೆ. ಸ್ಫೋಟಗೊಳ್ಳಲು ಕಾರಣ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆಯುತ್ತಿದ್ದು, ಕೆಮಿಕಲ್ ಟೆಸ್ಟ್ ಮಾಡೋದಕ್ಕೂ ಮುನ್ನ ಪರ್ಮಿಷನ್ ತಗೆದುಕೊಂಡಿದ್ದರಾ? ಎನ್ನುವ ಬಗ್ಗೆ ಅಧಿಕಾರಿಗಳು ಘಟನಾ ಸ್ಥಳದ ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಲಿದ್ದಾರೆ.
ನಾಳೆಯಿಂದ(ಆಗಸ್ಟ್ 17) ಆತಂರಿಕ ತನಿಖೆ ಆರಂಭವಾಗಲಿದ್ದು, ಘಟನೆಗೆ ಕಾರಣ ಏನು ? ಯಾವ ಟೆಸ್ಟ್ ಮಾಡಲಿಕ್ಕೆ ಹೊರಟಿದ್ದರು? ಡಿ ಗ್ರೂಪ್ ನೌಕರನಿಗೆ ಟೆಸ್ಟ್ ಮಾಡಿಸಲು ಸೂಚಿಸಿದ್ದು ಏಕೆ? ಕೆಮಿಕಲ್ ಟೆಸ್ಟ್ ಮಾಡುವುದಕ್ಕೆ ಮುಂಚೆ ಹೈಯರ್ ಅಥಾರಿಟಿ ಪರ್ಮಿಷನ್ ತೆಗೆದುಕೊಂಡಿದ್ರಾ ? ಡಿ. ಗ್ರೂಪ್ ನೌಕರನಿಗೆ ಟೆಸ್ಟ್ ಮಾಡಲು ಸೂಚಿಸಿ. ಸ್ಥಳದಲ್ಲಿ ಇರದೇ ಸಲಹೆ ಕೊಡದೇ ಎಸ್ಕೇಪ್ ಆಗಿದ್ದು ಏಕೆ? ಹೀಗೆ ಪ್ರಕರಣ ಸಂಬಂಧ ಹಲವು ಆಯಾಮಗಳಲ್ಲಿ ತನಿಖೆ ನಡೆಯಲಿದೆ.
ಸದ್ಯ ಈ ಅಗ್ನಿ ಅವಘಡದ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿದ್ದು,. ಸಂಪೂರ್ಣ ತನಿಖೆ ಬಳಿಕ ಮತ್ತಷ್ಟು ಸ್ಫೋಟಕ ಸತ್ಯ ಹೊರ ಬರುವ ಸಾಧ್ಯತೆ ಇದೆ.
ಇನ್ನಷ್ಟು ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ