ಟೀಕಿಸುತ್ತಿರುವವರ ಟೀಕೆಗಳು ತೀರಿದ ಬಳಿಕ ಅವರೆಲ್ಲರಿಗೆ ಉತ್ತರಿಸುವೆ; ಆ ಸಮಯವಿನ್ನೂ ಬಂದಿಲ್ಲ: ಡಿಕೆ ಶಿವಕುಮಾರ್, ಡಿಸಿಎಂ

ಟೀಕಿಸುತ್ತಿರುವವರ ಟೀಕೆಗಳು ತೀರಿದ ಬಳಿಕ ಅವರೆಲ್ಲರಿಗೆ ಉತ್ತರಿಸುವೆ; ಆ ಸಮಯವಿನ್ನೂ ಬಂದಿಲ್ಲ: ಡಿಕೆ ಶಿವಕುಮಾರ್, ಡಿಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 16, 2023 | 1:08 PM

ಮಾಧ್ಯಮಗಳಿಂದ ಕುಮಾರಸ್ವಾಮಿ ಅವರಿಗೆ ಹಿಟ್ ಅಂಡ್ ರನ್ ಹೆಸರು ಕೂಡ ಸಿಕ್ಕಿದೆ, ಯಾಕೆಂದರೆ ಅವರು ಆರೋಪಗಳನ್ನು ಮಾಡುತ್ತಾರೆ, ಅದರೆ ಸಾಬೀತು ಮಾಡುವುದಿಲ್ಲ. ಇತ್ತೀಚಿನ ಪೆನ್ ಡ್ರೈವ್ ಪ್ರಕರಣ ನಮ್ಮ ಮುಂದಿದೆ.

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವೆ 2-3 ವರ್ಷಗಳಿಂದ ಕೋಳಿ ಕಾಳಗ ನಡೆಯುತ್ತಿದೆ. ಪರಸ್ಪರ ದೋಷಾರೋಪಣೆಗಳನ್ನು ಅವರು ಮಾಡುವುದನ್ನು ನೋಡಿ, ಕೇಳಿ ಕನ್ನಡಿಗರಿಗೆ ಸಾಕಾಗಿರಬಹುದು. ಕುಮಾರಸ್ವಾಮಿ ಅಧಿಕಾರದಲ್ಲಿರದಾಗ ಅರೋಪಗಳನ್ನು ಮಾಡುವುದನ್ನು ಕಾಯಕ ಮಾಡಿಕೊಂಡಂತಿದೆ. ಮಾಧ್ಯಮಗಳಿಂದ ಅವರಿಗೆ ಹಿಟ್ ಅಂಡ್ ರನ್ (hit and run) ಹೆಸರು ಕೂಡ ಸಿಕ್ಕಿದೆ, ಯಾಕೆಂದರೆ ಅವರು ಆರೋಪಗಳನ್ನು ಮಾಡುತ್ತಾರೆ, ಅದರೆ ಸಾಬೀತು ಮಾಡುವುದಿಲ್ಲ. ಇತ್ತೀಚಿನ ಪೆನ್ ಡ್ರೈವ್ ಪ್ರಕರಣ ನಮ್ಮ ಮುಂದಿದೆ. ಮತ್ತೊಂದೆಡೆ ಶಿವಕುಮಾರ್ ಜೆಡಿಎಸ್ ನಾಯಕನ ಆರೋಪಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಮಾಧ್ಯಮದವರಿಂದ ಕೇಳಿಸಿಕೊಂಡ ಬಳಿಕ ಉಗ್ರವಾಗಿ ಪ್ರತಿಕ್ರಿಯಿಸದೆ ಶಾಂತವಾಗಿ ಸೂಕ್ತ ಸಮಯದಲ್ಲಿ ಉತ್ತರ ಕೊಡುತ್ತೇನೆ ಅನ್ನುತ್ತಾರೆ. ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳು ನೀವು ಉತ್ತರ ನೀಡುವ ಶುಭ ಮುಹೂರ್ತ ಯಾವಾಗೆ ಬರುತ್ತೆ ಅಂತ ಕೇಳಿದಾಗ ಅವರು ಎಂದಿನಂತೆ ಶಾಂತರಾಗೇ ಟೀಕಿಸುತ್ತಿರುವವರೆಲ್ಲ ದಣಿಯಲಿ ಮತ್ತು ಅವರ ಬತ್ತಳಿಕೆಯಲ್ಲಿರಬಹುದಾದ ಅಸ್ತ್ರಗಳೆಲ್ಲ ಕೊನೆಗೊಳ್ಳಲಿ, ಆದಾದ ಮೇಲೆ ಉತ್ತರಿಸುವುದಾಗಿ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ