Video: ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಮೋದಿ ಸಹೋದರನ ಮಗ ಸಚಿನ್ ಮೋದಿ

|

Updated on: Jan 19, 2025 | 2:10 PM

ಉತ್ತರ ಪ್ರದೇಶದಲ್ಲಿ ಮಹಾಕುಂಭ ಮೇಳ ಆರಂಭಾಗಿದೆ. ಇಲ್ಲಿಯವರೆಗೆ ಕೋಟ್ಯಂತರ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದು, ಈ ಟ್ರೆಂಡ್ ಮುಂದುವರೆದಿದೆ. ಏತನ್ಮಧ್ಯೆ, ಮಹಾಕುಂಭದಿಂದ ಅನೇಕ ವೀಡಿಯೊಗಳು ಸಹ ಹೊರಬರುತ್ತಿದ್ದು, ಜನರು ಇದನ್ನು ಇಷ್ಟಪಡುತ್ತಿದ್ದಾರೆ. ಇದೇ ರೀತಿಯ ವಿಡಿಯೋ ಪ್ರಧಾನಿ ಮೋದಿಯವರ ಸಹೋದರನ ಮಗನ ವಿಡಿಯೋ ಕೂಡ ಹೊರಬಿದ್ದಿದೆ. ಸಚಿನ್ ಪಂಕಜಭಾಯಿ ಮೋದಿ ಕೂಡ ಕುಂಭಮೇಳಕ್ಕೆ ಆಗಮಿಸಿದ್ದರು.

ಉತ್ತರ ಪ್ರದೇಶದಲ್ಲಿ ಮಹಾಕುಂಭ ಮೇಳ ಆರಂಭಾಗಿದೆ. ಇಲ್ಲಿಯವರೆಗೆ ಕೋಟ್ಯಂತರ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದು, ಈ ಟ್ರೆಂಡ್ ಮುಂದುವರೆದಿದೆ. ಏತನ್ಮಧ್ಯೆ, ಮಹಾಕುಂಭದಿಂದ ಅನೇಕ ವೀಡಿಯೊಗಳು ಸಹ ಹೊರಬರುತ್ತಿದ್ದು, ಜನರು ಇದನ್ನು ಇಷ್ಟಪಡುತ್ತಿದ್ದಾರೆ.  ಪ್ರಧಾನಿ ಮೋದಿಯವರ ಸಹೋದರನ ಮಗನ ವಿಡಿಯೋ ಕೂಡ ಹೊರಬಿದ್ದಿದೆ.
ಸಚಿನ್ ಪಂಕಜಭಾಯಿ ಮೋದಿ ಕೂಡ ಕುಂಭಮೇಳಕ್ಕೆ ಆಗಮಿಸಿದ್ದರು.

ಅವರು ವೃತ್ತಿಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿದ್ದರೂ ಭಜನೆಗಳನ್ನು ಹಾಡುವುದೆಂದರೆ ಅಚ್ಚುಮೆಚ್ಚು. ಸಚಿನ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಮಹಾಕುಂಭದಲ್ಲಿ ಭಜನೆ ಹಾಡಿದ್ದಾರೆ. ಸಚಿನ್ ಮತ್ತು ಆತನ ಗೆಳೆಯರು ಮಹಾಕುಂಭಮೇಳದಲ್ಲಿ ಭಜನೆಗಳನ್ನು ಹಾಡುತ್ತಿರುವುದನ್ನು ಮತ್ತು ಯುವಕರಲ್ಲಿ ಸನಾತನ ಧರ್ಮದ ಉತ್ಸಾಹವನ್ನು ಜಾಗೃತಗೊಳಿಸುತ್ತಿರುವುದನ್ನು ನೋಡಬಹುದಾಗಿದೆ.

ತಮ್ಮ ಸ್ನೇಹಿತರೊಂದಿಗೆ ಭಜನಾ ತಂಡವನ್ನು ಸಹ ರಚಿಸಿರುವ ಅವರು ಪ್ರತಿ ಶನಿವಾರ ಅಹಮದಾಬಾದ್ ಮತ್ತು ಗಾಂಧಿನಗರದ ವಿವಿಧ ಕೆಫೆಗಳಿಗೆ ತಮ್ಮ ಗುಂಪಿನೊಂದಿಗೆ ತೆರಳಿ ಹನುಮಾನ್ ಚಾಲೀಸಾ ಮತ್ತು ಭಜನೆಗಳನ್ನು ಹಾಡುತ್ತಾರೆ ಮತ್ತು ಯುವಕರನ್ನು ತಮ್ಮೊಂದಿಗೆ ಸೇರಿಕೊಳ್ಳುವಂತೆ ಪ್ರೇರೇಪಿಸುತ್ತಾರೆ.

ದಾಮೋದರದಾಸ್ ಮೋದಿ ಮತ್ತು ಹೀರಾಬೆನ್​ಗೆ ಒಟ್ಟು 6 ಮಕ್ಕಳು. ಅದರಲ್ಲಿ ಪ್ರಧಾನಿ ಮೋದಿ ಮೂರನೇ ಮಗ . ಅಮೃತ್ ಮೋದಿ, ಪಂಕಜ್ ಮೋದಿ, ಪ್ರಹ್ಲಾದ್ ಮೋದಿ, ಸೋಮಾ ಮೋದಿ ಮತ್ತು ಮಗಳು ವಸಂತಿ ಬೆನ್ ಹನ್ಸ್ಮುಖಲಾಲ್ ಮೋದಿ. ವಾಸಂತಿಬೆನ್ ಪ್ರಧಾನಿ ಮೋದಿಯವರ ಏಕೈಕ ಸಹೋದರಿ. ಸೋಮ ಮೋದಿ ಎಂಬುದು ಪ್ರಧಾನಿ ಮೋದಿಯವರ ಹಿರಿಯ ಸಹೋದರನ ಹೆಸರು.

ಪ್ರಧಾನಿ ಮೋದಿಯವರ ಎರಡನೇ ಅಣ್ಣನ ಹೆಸರು ಅಮೃತ್ ಭಾಯಿ ಮೋದಿ. ಆದರೆ ಪ್ರಧಾನಿ ಮೋದಿ, ಪ್ರಹ್ಲಾದ್ ಮತ್ತು ಪಂಕಜ್ ಭಾಯಿ ಮೋದಿಗಿಂತ ಹಿರಿಯರು. ಪಂಕಜ್ ವಾರ್ತಾ ಇಲಾಖೆಯಿಂದ ನಿವೃತ್ತರಾಗಿದ್ದಾರೆ. ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಪಂಕಜ್ ಜೊತೆ ವಾಸಿಸುತ್ತಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Jan 19, 2025 02:04 PM