ಮಹಾನಟಿ ವಿನ್ನರ್ ವಂಶಿ ಲವ್ ಕೇಸ್: ಎಲ್ಲವನ್ನೂ ವಿವರಿಸಿದ ನಟಿ

Edited By:

Updated on: Nov 13, 2025 | 9:46 PM

‘ಮಹಾನಟಿ 2’ ವಿನ್ನರ್ ಆಗಿ ವಂಶಿ ಅವರು ಹೊರಹೊಮ್ಮಿದ್ದಾರೆ. ಇದೇ ಖುಷಿಯಲ್ಲಿ ಅವರು ಟಿವಿ9 ಜತೆ ಮಾತಾಡಿದ್ದಾರೆ. ಮಹಾನಟಿ ವಿನ್ನರ್ ಆದ ಅವರಿಗೆ ಈಗ ‘ಲವ್ ಕೇಸ್’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ. ಈ ಕುರಿತು ಅವರು ಖುಷಿ ಹಂಚಿಕೊಂಡಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ..

‘ಮಹಾನಟಿ ಸೀಸನ್ 2’ ರಿಯಾಲಿಟಿ ಶೋ ವಿನ್ನರ್ ಆಗಿ ವಂಶಿ (Mahanati winner Vamshi) ಅವರು ಹೊರಹೊಮ್ಮಿದ್ದಾರೆ. ಇದೇ ಖುಷಿಯಲ್ಲಿ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಮಹಾನಟಿ ವಿನ್ನರ್ ಆದ ಅವರಿಗೆ ಈಗ ‘ಲವ್ ಕೇಸ್’ (Love Case) ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಈ ಕುರಿತು ಅವರು ಖುಷಿ ಹಂಚಿಕೊಂಡಿದ್ದಾರೆ. ‘ಲವ್ ಕೇಸ್​​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದೇನೆ. ಸದ್ಯಕ್ಕೆ ಅದು ಬೇಕು. ಬಂದಿರುವ ಅವಕಾಶವನ್ನು ಬಿಡಲು ನನಗೆ ಇಷ್ಟ ಇಲ್ಲ. ಆದಷ್ಟು ಬೇಗ ದೊಡ್ಡ ಪರದೆಯಲ್ಲಿ ಲವ್ ಕೇಸ್​ನಿಂದ ಬಿಡಿಸಿಕೊಂಡು ಬರುತ್ತೇನೆ. ಎಲ್ಲರ ಬೆಂಬಲ ಬೇಕು. ಮೊನ್ನೆ ತಾನೇ ಮುಹೂರ್ತ ಆಗಿದೆ. ಮೊದಲ ಹಂತದ ಶೂಟಿಂಗ್ ಆಗಿದೆ. ಮುಂದೆ ಈ ಬಗ್ಗೆ ಅಪ್​ಡೇಟ್ ಕೊಡುತ್ತೇನೆ’ ಎಂದು ವಂಶಿ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.