ಮಹಾರಾಷ್ಟ್ರ ಗಡಿಭಾಗದ ನಮ್ಮ ಗ್ರಾಮಗಳನ್ನು ಕಬ್ಜಾ ಮಾಡಿಕೊಳ್ಳಲು ಹುನ್ನಾರ ನಡೆಸಿದೆ, ನಮ್ಮ ಸಂಸದರು ನಿದ್ರಿಸುತ್ತಿದ್ದಾರೆಯೇ? ಪ್ರಿಯಾಂಕ್ ಖರ್ಗೆ
ಮಾತ್ತೆತ್ತಿದರೆ ಉರಿಗೌಡ, ನಂಜೇಗೌಡ, ಅಜಾನ್ ಎನ್ನುವ ನಳಿನ್ ಕುಮಾರ್ ಕಟೀಲ್, ಸಿಟಿ ರವಿ ಮತ್ತು ಸಿಎನ್ ಅಶ್ವಥ್ ನಾರಾಯಣ ಬಾಯಲ್ಲಿ ಬೆರಳಿಟ್ಟುಕೊಂಡು ಚೀಪುತ್ತಿದ್ದಾರೆಯೇ ಎಂದು ಖರ್ಗೆ ಪ್ರಶ್ನಿಸಿದರು.
ದೆಹಲಿ: ಮಹಾರಾಷ್ಟ್ರ ಸರ್ಕಾರ ಕರ್ನಾಟಕ ಗಡಿಭಾಗದ 800 ಕ್ಕೂ ಹೆಚ್ಚು ಗ್ರಾಮಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಳ್ಳಲು ಸದನದಲ್ಲಿ ಗೊತ್ತುವಳಿಯೊಂದನ್ನು ಪಾಸು ಮಾಡಿಕೊಂಡರೂ ಅದರ ಬಗ್ಗೆ ಸಂಸತ್ತಿನಲ್ಲಿ ಚಕಾರವೆತ್ತದ ರಾಜ್ಯದ 25 ಬಿಜೆಪಿ ಶಾಸಕರ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದರು. ನಮ್ಮ ಸಂಸದರು ರಾಜ್ಯದ ಅಸ್ಮಿತೆಗೆ ಧಕ್ಕೆ ಬಂದಾಗ ಸಂಸತ್ತಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಮತ್ತು ಅಮಿತ್ ಶಾ ಎದುರು ನಿಂತು ರಾಜ್ಯದ ಸಮಸ್ಯೆಗಳನ್ನು ಚರ್ಚಿಸಲಾರದಷ್ಟು ಅಶಕ್ತರು ಮತ್ತು ಅಸಮರ್ಥರೇ? ಮಾತ್ತೆತ್ತಿದರೆ ಉರಿಗೌಡ, ನಂಜೇಗೌಡ, ಅಜಾನ್ ಎನ್ನುವ ನಳಿನ್ ಕುಮಾರ್ ಕಟೀಲ್ (Nalin Kumar Kateel), ಸಿಟಿ ರವಿ ಮತ್ತು ಸಿಎನ್ ಅಶ್ವಥ್ ನಾರಾಯಣ ಬಾಯಲ್ಲಿ ಬೆರಳಿಟ್ಟುಕೊಂಡು ಚೀಪುತ್ತಿದ್ದಾರೆಯೇ ಎಂದು ಖರ್ಗೆ ಪ್ರಶ್ನಿಸಿದರು. ನಾಡಿನ ಜಲ, ನೆಲ, ಮತ್ತು ಭಾಷೆಯ ಪ್ರಶ್ನೆ ಬಂದಾಗ ಕಾಂಗ್ರೆಸ್ ಸುಮ್ಮನಿರಲಾರದು, ರಾಜ್ಯ ಸರ್ಕಾರ ಮಹಾರಾಷ್ಟ್ರ ಸರ್ಕಾರ ನಡೆಯನ್ನು ಪ್ರಶ್ನಿಸಲಿ ನಾವು ಬೆಂಬಲಿಸುತ್ತೇವೆ ಎಂದು ಖರ್ಗೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ