Loading video

ಬಾಗಲಕೋಟೆ: ಮುಧೋಳ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆದ ಲೋಕೋಶ್ವರ ದೇವಸ್ಥಾನದ ಮಹಾರಥೋತ್ಸವ

|

Updated on: Feb 28, 2025 | 11:22 AM

ಬೇಸಿಗೆ ಬಂತು ಅಂತಾದರೆ ಜಾತ್ರೆಗಳ ಕಲರವ ಶುರುವಾಗುತ್ತದೆ. ಉತ್ತರ ಕರ್ನಟಕದ ಬಹಳಷ್ಟು ಗ್ರಾಮಗಳಲ್ಲಿ ಒಂದಿಲ್ಲೊಂದು ಜಾತ್ರೆ ನಡೆಯುತ್ತದೆ. ಜಾತ್ರೆಗಳನ್ನು ಆಧಾರವಾಗಿಟ್ಟುಕೊಂಡು ಜನ ತಮ್ಮ ಮನೆಗಳಲ್ಲಿ ಮದುವೆ, ಮುಂಜಿಯಂಥ ಕಾರ್ಯಕ್ರಮಗಳ ದಿನಾಂಕಗಳನ್ನು ನಿಗದಿಪಡಿಸುತ್ತಾರೆ. ಸುಗ್ಗಿಯಾದ ಕಾರಣ ರೈತರ ಕೈಯಲ್ಲಿ ದುಡ್ಡು ಆಡುತ್ತಿರುತ್ತದೆ ಮತ್ತು ಮಕ್ಕಳು ಪರೀಕ್ಷೆ ಮುಗಿದು ರಜೆ ಶುರುವಾದ ಕಾರಣಕ್ಕೆ ಸಂತೋಷದಲ್ಲಿರುತ್ತಾರೆ.

ಬಾಗಲಕೋಟೆ, ಫೆ 28  : ಜಿಲ್ಲೆಯ ಮುಧೋಳ ಪಟ್ಟಣದಲ್ಲಿ (Mudhol town) ನಡೆಯುವ ಲೋಕೇಶ್ವರ ಮಹಾರಥೋತ್ಸವ ಸುತ್ತಮುತ್ತಲಿನ ಪ್ರದೇಶಗಳಲೆಲ್ಲ ಹೆಸರುವಾಸಿ. ಬೇರೆ ಬೇರೆ ಊರುಗಳ ಸಾವಿರಾರು ಭಕ್ತಾದಿಗಳು ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಮುಧೋಳದಲ್ಲಿರುವ ಲೋಕೇಶ್ವರ ದೇವಸ್ಥಾನವನ್ನು ಭಕ್ತರ ಕಾಮಧೇನು ಅಂತ ಕರೆಯುತ್ತಾರೆ. ಗುಡಿಗೆ ಬಂದು ಪೂಜೆ ಸಲ್ಲಿಸುವ ಮತ್ತು ವರ್ಷಕ್ಕೊಮ್ಮೆ ನಡೆಯುವ ಮಹಾರಥೋತ್ಸವದಲ್ಲಿ ಭಾಗಿಯಾಗುವ ಭಕ್ತರ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ನಿನ್ನೆ ನಡೆದ ರಥೋತ್ಸವದಲ್ಲಿ ಭಾಗಿಯಾದ ಸಾವಿರಾರು ಭಕ್ತರು ಜಯಘೋಷ ಮಾಡುತ್ತ ರಥದ ಮೇಲೆ ಬಾಳೆಹಣ್ಣುಗಳನ್ನು ಎಸೆದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮಹಾಶಿವರಾತ್ರಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಜಾತ್ರೆ, ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ