[lazy-load-videos-and-sticky-control id=”O-ub6zKbo24″]
ಬಾಗಲಕೋಟೆ: ಘಟಪ್ರಭಾ ನದಿ ಭೋರ್ಗರೆದು ಹರಿಯುತ್ತಿದೆ. 80 ಸಾವಿರ ಕ್ಯೂಸೆಕ್ ನೀರಿನ ಹರಿವಿನಿಂದ ಘಟಪ್ರಭಾ ನದಿ ತೀರದ ಜನರಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಯಾವುದೇ ಕ್ಷಣದಲ್ಲಿ ಮುಧೋಳ ಯಾದವಾಡ ಸೇತುವೆ ಮುಳುಗಡೆಯಾಗುವ ಸಾದ್ಯತೆ ಇದೆ.
ಅಪಾಯದಮಟ್ಟ ಮೀರಿ ಮಲಪ್ರಭಾ ನದಿ ಹರಿಯುತ್ತಿದೆ. ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮಕ್ಕೆ ನೀರು ನುಗ್ಗಿದೆ. ಬೆಳ್ಳಂಬೆಳಿಗ್ಗೆ ಹರಿದು ಬಂದ ನೀರಿನಿಂದಾಗಿ ಬೇರೆಡೆ ಸ್ಥಳಾಂತರವಾಗಲು ಗ್ರಾಮಸ್ಥರು ಪರದಾಡುವಂತ ಪರಿಸ್ಥಿತಿ ಎದುರಾಗಿದೆ.
ಕಳೆದ ವರ್ಷವೂ ಮಲಪ್ರಭೆ ಪ್ರವಾಹಕ್ಕೆ 113 ಮನೆಗಳು ನೆಲಸಮವಾಗಿದ್ವು. ಈಗ ಮತ್ತೆ ಗ್ರಾಮಸ್ಥರು ಪ್ರವಾಹ ಆತಂಕದಲ್ಲಿದ್ದಾರೆ. ಜೊತೆಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ಹೊರವಲಯದ ಪ್ರದೇಶಗಳಿಗೂ ನೀರು ನುಗ್ಗಿದೆ. ಹಳೆಯ ದನದಪೇಟೆ ಬಳಿ ಹಲವು ಮನೆಗಳು ಜಲಾವೃತಗೊಂಡಿವೆ. ಮಸೀದಿ, ಅಂಗಡಿಮುಂಗಟ್ಟಿಗೂ ನೀರು ನುಗ್ಗಿದೆ. ಅನೇರು ತಮ್ಮ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ.
Published On - 9:47 am, Tue, 18 August 20