+ve ನ್ಯೂಸ್: ಕಿಲ್ಲರ್ ಕೊರೊನಾಗೆ ಕನ್ನಡಿಗ ವೈದ್ಯ ದಾಮ್ಲೆಯಿಂದ ಔಷಧಿ ಸಾಧ್ಯತೆ

+ve ನ್ಯೂಸ್: ಕಿಲ್ಲರ್ ಕೊರೊನಾಗೆ ಕನ್ನಡಿಗ ವೈದ್ಯ ದಾಮ್ಲೆಯಿಂದ ಔಷಧಿ ಸಾಧ್ಯತೆ

[lazy-load-videos-and-sticky-control id=”HQMVMxMcCCg”]

ಬೆಂಗಳೂರು: ಕೊರೊನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಗುಡ್​ನ್ಯೂಸ್ ಸಿಕ್ಕಿದೆ. ಆಯುರ್ವೇದದಲ್ಲೇ ಡೆಡ್ಲಿ ಕೊರೊನಾಗೆ ಔಷಧಿ ಇದೆಯಂತೆ. ಐಸಿಎಂಆರ್​ ಲ್ಯಾಬ್​ನಲ್ಲಿ ಸಸ್ಯಾಧಾರಿತ ಔಷಧ ಪ್ರಯೋಗ ನಡೆದಿದೆ.

ಕಿಲ್ಲರ್ ಕೊರೊನಾ ಎದುರಿಸಲು ಕನ್ನಡಿಗರಿಂದಲೇ ಔಷಧಿ ಸಿಗುವ ಸಾಧ್ಯತೆ ಇದೆ. ಕನ್ನಡಿಗ ವೈದ್ಯ ಹೃಷಿಕೇಶ್​ ದಾಮ್ಲೆ ಔಷಧಿ ಕಂಡು ಹಿಡಿದಿದ್ದಾರೆ. ICMR ಲ್ಯಾಬ್​ನಲ್ಲಿ ಸಸ್ಯಾಧಾರಿತ ಔಷಧದ ಪ್ರಯೋಗ ನಡೆಯುತ್ತಿದೆ. ಈ ರೀತಿ ಕೊರೊನಾ ವೈರಸ್ ಮೇಲೆ‌ ಆಯುರ್ವೇದದಲ್ಲಿ ನಡೆದ ಮೊದಲ ಪ್ರಯೋಗ ಇದಾಗಿದೆ ಎನ್ನಲಾಗ್ತಿದೆ. ಸಸ್ಯಾಧಾರಿತ ಪರೀಕ್ಷೆಯಲ್ಲಿ‌ ಆ ಒಂದು ಸಸ್ಯ ಕೊರೊನಾ ವೈರಸನ್ನು ಕೊಂದಿದೆಯಂತೆ.

ಸಸ್ಯ ಯಾವುದು? ಸದ್ಯಕ್ಕೆ ಹೇಳೋಲ್ಲ 
ಫರೀದಾಬಾದ್​ನ ಜೈವಿಕ ತಂತ್ರಜ್ಞಾನ ಸಂಸ್ಥೆಯಲ್ಲಿ ನಡೆದ ಪ್ರಯೋಗದಲ್ಲಿ ವೈರಸ್ ಕೊಂದಿರುವ ಕುರಿತು ಲ್ಯಾಬ್ ವರದಿ ನೀಡಿದೆ. ಒಟ್ಟು 3 ಲಕ್ಷ ಸಸಿಗಳ ಪೈಕಿ ಹೆಕ್ಕಿ ತೆಗೆದು 10 ಸಸ್ಯಗಳನ್ನ ಟೆಸ್ಟ್​ಗಾಗಿ ICMR ಗೆ ಕಳುಹಿಸಲಾಗಿದೆ. ಅಟ್ರಿಮೆಡ್ ಫಾರ್ಮಾಸ್ಯುಟಿಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಓ ಡಾ. ಹೃಷಿಕೇಶ್ ದಾಮ್ಲೆ ಸಲ್ಲಿಸಿದ್ದ ಸಸ್ಯಾಧಾರಿತ ಔಷಧಕ್ಕೆ ICMR ಲ್ಯಾಬ್​ನಲ್ಲೂ‌ ಉತ್ತಮ‌ ಫಲಿತಾಂಶ ಸಿಕ್ಕಿದೆ. 10 ಸಸ್ಯಗಳ ಪೈಕಿ ನಾಲ್ಕು‌ ಸಸ್ಯಗಳು ಕೊರೊನಾ ವೈರಸನ್ನು ಕೊಂದು ಹಾಕಿವೆ. ಒಂದು ಸಸ್ಯ‌ ಸಂಪೂರ್ಣವಾಗಿ ಕೊರೊನಾ ವೈರಸನ್ನು ಕೊಂದಿದೆ ಎಂದ ಲ್ಯಾಬ್ ರಿಪೋರ್ಟ್ ತಿಳಿಸಿದೆ.

ಸದ್ಯ ದಾಮ್ಲೆ ಮಾನವ ಪ್ರಯೋಗಕ್ಕೆ ಅನುಮತಿ ಕೋರಲಿದ್ದಾರೆ. ಮಾನವ ಪ್ರಯೋಗಕ್ಕೆ ಅನುಮತಿ ನೀಡಿದರೆ ಮೂರು ತಿಂಗಳೊಳಗೆ ಔಷಧಿ ಸಿದ್ಧವಾಗಲಿದೆ. ಆದರೆ ಅದು ಯಾವ ಸಸ್ಯ ಎಂದು ಡಾ. ಹೃಷಿಕೇಶ್ ದಾಮ್ಲೆ ಬಹಿರಂಗ ಪಡಿಸಿಲ್ಲ.

Click on your DTH Provider to Add TV9 Kannada