ಸಚಿವ್ರೇ ಯಾಕಿಷ್ಟು ನಿರ್ಲಕ್ಷ್ಯ? ಸೋರುವ ಆಸ್ಪತ್ರೆಯಲ್ಲೇ ಗರ್ಭಿಣಿಯರಿಗೆ ಹೆರಿಗೆ ನಡೆಯುತ್ತಿದೆ!
ಯಾದಗಿರಿ: ಆರೋಗ್ಯ ಸಚಿವರೇ ಈ ಸ್ಟೋರಿ ನೀವು ನೋಡಲೇಬೇಕು.. ಈ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಹೆರಿಗೆ ಮಾಡುವಾಗ ಮೇಲೆ ಟಾರ್ಪಲ್ ಹಿಡಿದು ಹೆರಿಗೆ ಮಾಡಿಸುವಂತ ಪರಿಸ್ಥಿತಿ ಈ ಆಸ್ಪತ್ರೆಯಲ್ಲಿದೆ. ಮಳೆ ಬಂದ್ರೆ ಸಾಕು ಆಸ್ಪತ್ರೆಯ ಬೆಡ್‌ಗಳ ಮೇಲೆ ನೀರು ಬಿಳುತ್ತೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲಗೊಂಡಿದೆ. ಮೇಲ್ಛಾವಣಿ ಸೋರುತ್ತಿರುವುದರಿಂದ ಹೆರಿಗೆ ಆದ ತಕ್ಷಣವೇ ಮನೆಯಲ್ಲಿಯೇ ನೀವೆ ಚಿಕಿತ್ಸೆ ಪಡೆಯಿರಿ ಅಂತಾ ಹೇಳಿ ಬಾಣಂತಿಯನ್ನು ಸಿಬ್ಬಂದಿ ಮನೆಗೆ ಕಳುಹಿಸಿಕೊಡುತ್ತಾರೆ. ಆಸ್ಪತ್ರೆಯಲ್ಲಿ […]
ಯಾದಗಿರಿ: ಆರೋಗ್ಯ ಸಚಿವರೇ ಈ ಸ್ಟೋರಿ ನೀವು ನೋಡಲೇಬೇಕು.. ಈ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಹೆರಿಗೆ ಮಾಡುವಾಗ ಮೇಲೆ ಟಾರ್ಪಲ್ ಹಿಡಿದು ಹೆರಿಗೆ ಮಾಡಿಸುವಂತ ಪರಿಸ್ಥಿತಿ ಈ ಆಸ್ಪತ್ರೆಯಲ್ಲಿದೆ.
ಮಳೆ ಬಂದ್ರೆ ಸಾಕು ಆಸ್ಪತ್ರೆಯ ಬೆಡ್‌ಗಳ ಮೇಲೆ ನೀರು ಬಿಳುತ್ತೆ. ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲಗೊಂಡಿದೆ.
ಮೇಲ್ಛಾವಣಿ ಸೋರುತ್ತಿರುವುದರಿಂದ ಹೆರಿಗೆ ಆದ ತಕ್ಷಣವೇ ಮನೆಯಲ್ಲಿಯೇ ನೀವೆ ಚಿಕಿತ್ಸೆ ಪಡೆಯಿರಿ ಅಂತಾ ಹೇಳಿ ಬಾಣಂತಿಯನ್ನು ಸಿಬ್ಬಂದಿ ಮನೆಗೆ ಕಳುಹಿಸಿಕೊಡುತ್ತಾರೆ.
ಆಸ್ಪತ್ರೆಯಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲದ ಕಾರಣ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟಕರವಾಗಿದೆ. ಮಳೆ ಸಮಯದಲ್ಲಂತೋ ಪರಿಸ್ಥಿತಿ ಹೇಳ ತೀರದು.
ಈ ಆಸ್ಪತ್ರೆಯ ಮೇಲ್ಛಾವಣಿ ಯಾವಾಗ ಕುಸಿಯುತ್ತೋ ಎಂಬ ಆತಂಕದಲ್ಲಿ ಸಾರ್ವಜನಿಕರಿದ್ದಾರೆ. ಹದಗೆಟ್ಟ ಆಸ್ಪತ್ರೆಯ ಬಗ್ಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಸಚಿವರು ಯಾಕಿಷ್ಟು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಜನ ಪ್ರಶ್ನಿಸಿದ್ದಾರೆ.