‘ಅಂಬರೀಷ್ ಜೊತೆ ಸುಮಲತಾ ನೋಡಿದ್ರೆ ನಂಗೆ ಹೊಟ್ಟೆಕಿಚ್ಚು ಆಗ್ತಿತ್ತು’: ಮಾಲಾಶ್ರೀ
ಮಂಡ್ಯದಲ್ಲಿ ‘ಕಾಟೇರ’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಬಹಳ ಗ್ರ್ಯಾಂಡ್ ಆಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮಾಲಾಶ್ರೀ, ಸುಮಲತಾ ಅಂಬರೀಷ್, ಅಭಿಷೇಕ್ ಅಂಬರೀಷ್ ಮುಂತಾದವರು ಭಾಗಿಯಾದರು. ವೇದಿಕೆಯಲ್ಲಿ ಮಾತನಾಡಿದ ಮಾಲಾಶ್ರೀ ಅವರು ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು.
ದರ್ಶನ್ ನಟನೆಯ ‘ಕಾಟೇರ’ ಸಿನಿಮಾದಲ್ಲಿ ಮಾಲಾಶ್ರೀ (Malashree) ಅವರ ಪುತ್ರಿ ರಾಧನಾ ರಾಮ್ ನಾಯಕಿ ಆಗಿದ್ದಾರೆ. ಇದು ಅವರ ಮೊದಲ ಸಿನಿಮಾ. ಡಿಸೆಂಬರ್ 29ರಂದು ಈ ಚಿತ್ರ ಬಿಡುಗಡೆ ಆಗಲಿದೆ. ಇತ್ತೀಚೆಗೆ ಮಂಡ್ಯದಲ್ಲಿ ಈ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಈ ಇವೆಂಟ್ಗೆ ಸುಮಲತಾ ಅಂಬರೀಷ್ (Sumalatha Ambareesh), ಅಭಿಷೇಕ್ ಅಂಬರೀಷ್ ಮುಂತಾದವರು ಹಾಜರಿ ಹಾಕಿದ್ದರು. ವೇದಿಕೆಯಲ್ಲಿ ನಟಿ ಮಾಲಾಶ್ರೀ ಮಾತನಾಡಿದರು. ‘ನಾನು ಸುಮಲತಾಗೆ ದೊಡ್ಡ ಅಭಿಮಾನಿ. ನಮ್ಮ ಸಿನಿಮಾದ ಶೂಟಿಂಗ್ ಲೊಕೇಷನ್ಗೆ ಅಂಬರೀಷ್ ಜೊತೆ ಸುಮಲತಾ ಬಂದರೆ ನನಗೆ ಹೊಟ್ಟೆಕಿಚ್ಚು ಆಗುತ್ತಿತ್ತು. ಅಂಬರೀಷ್ಗೆ ನಾನು ಹೀರೋಯಿನ್ ಆಗಿದ್ದರೂ ಕೂಡ ಸುಮಲತಾ ಅವರೇ ಅಂಬರೀಷ್ಗೆ ಸೂಪರ್ ಜೋಡಿ’ ಎಂದರು ಮಾಲಾಶ್ರೀ. ಮೊದಲ ಸಿನಿಮಾದಲ್ಲೇ ತಮ್ಮ ಮಗಳು ದರ್ಶನ್ ಜೊತೆ ನಟಿಸಿದ್ದಕ್ಕೆ ಮಾಲಾಶ್ರೀ ಸಂಸತ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.