AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ಇಂದಿರಾ ಗಾಂಧಿ ಕಾಲದ ಕತೆ: ‘ಕಾಟೇರ’ ಬಗ್ಗೆ ದರ್ಶನ್ ಮಾತು

Darshan: ಹುಬ್ಬಳ್ಳಿಯಲ್ಲಿ ಇಂದು (ಡಿಸೆಂಬರ್ 16) ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ದರ್ಶನ್ ನಟನೆಯ ‘ಕಾಟೇರ’ ಸಿನಿಮಾದ ಟ್ರೈಲರ್ ಬಿಡುಗಡೆ ಆಯ್ತು. ಕಾರ್ಯಕ್ರಮದಲ್ಲಿ ನಟ ದರ್ಶನ್ ಮಾತನಾಡಿದರು.

ಇದು ಇಂದಿರಾ ಗಾಂಧಿ ಕಾಲದ ಕತೆ: ‘ಕಾಟೇರ’ ಬಗ್ಗೆ ದರ್ಶನ್ ಮಾತು
ಮಂಜುನಾಥ ಸಿ.
|

Updated on: Dec 16, 2023 | 11:31 PM

Share

ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾದ ಟ್ರೈಲರ್ ಇಂದು (ಡಿಸೆಂಬರ್ 16) ಬಿಡುಗಡೆ ಆಗಿದೆ. ಹುಬ್ಬಳ್ಳಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ‘ಕಾಟೇರ’ ಸಿನಿಮಾದ ಟ್ರೈಲರ್ ಲಾಂಚ್ ಮಾಡಿದರು. ಸಿನಿಮಾಕ್ಕಾಗಿ ಕೆಲಸ ಮಾಡಿದ ಕಲಾವಿದರು, ತಂತ್ರಜ್ಞರು ಈ ಸಂದರ್ಭದಲ್ಲಿ ಮಾತನಾಡಿ, ಸಿನಿಮಾದ ಬಗ್ಗೆ ನಟ ದರ್ಶನ್ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ದೀರ್ಘವಾಗಿ ನಡೆದ ಕಾರ್ಯಕ್ರಮದಲ್ಲಿ ಕೊನೆಯದಾಗಿ ಮಾತನಾಡಿದ ದರ್ಶನ್, ‘ಕಾಟೇರ’ ಸಿನಿಮಾದ ಕತೆ ಬಗ್ಗೆ ಕೆಲವು ಗುಟ್ಟುಗಳನ್ನು ಬಿಟ್ಟುಕೊಟ್ಟರು.

‘ಕಾಟೇರ’ ವಿಭಿನ್ನವಾದ ಕತೆಯುಳ್ಳ ಸಿನಿಮಾ. ಟ್ರೈಲರ್​ನಲ್ಲಿ ಕಾಣುವ ಮೊದಲ ಹಾಗೂ ಕೊನೆಯ ದೃಶ್ಯಗಳೇ ಸಿನಿಮಾದಲ್ಲಿಯೂ ಓಪನಿಂಗ್ ಹಾಗೂ ಕೊನೆಯ ದೃಶ್ಯಗಳು, ಟ್ರೈಲರ್​ನಲ್ಲಿ ಏನು ತೋರಿಸಿದ್ದೇವೆಯೋ ಅದು ಸಿನಿಮಾದಲ್ಲಿಯೂ ಇದೆ. ಆದರೆ ದೊಡ್ಡದಾಗಿ, ಬೃಹತ್ತಾಗಿ ಇದೆ. ನಾವು ಮಾಡಿರುವುದು ನಿಜವಾದ ಘಟನೆ ಆಧರಿಸಿದ ಸಿನಿಮಾ. ಇಂದಿರಾ ಗಾಂಧಿ ಕಾಲದಲ್ಲಿ ನಡೆದ ನಿಜ ಘಟನೆಯನ್ನೇ ಸಿನಿಮಾ ಮಾಡಿದ್ದೀವಿ, ಉಳುವವನೆ ಭೂಮಿಯ ಒಡೆಯ ಕಾನೂನು ಬಂದಾದ ನಡೆದ ಘಟನೆ ಇದು. 1974 ರ ಕಾಲದ ಕೆಲವು ಕಹಿ ಘಟನೆಗಳನ್ನು ಹೇಳಲು ಹೊರಟಿದ್ದೀವಿ. ಆವಾಗ ಬಾವಿಯಲ್ಲಿ ತುಂಬಾ ಜನರ ಮೂಳೆಗಳು ಸಿಕ್ಕಿತ್ತಂತೆ, ಆದರೆ ಆ ಮೂಳೆಗಳು ಯಾರದ್ದೆಂದು ಇಲ್ಲಿವರೆಗೆ ತಿಳಿದಿಲ್ಲ, ನಮ್ಮ ಸಿನಿಮಾದಲ್ಲಿಯೂ ಅದೇ ವಿಷಯ ಇದೆ’’ ಎಂದಿದ್ದಾರೆ ದರ್ಶನ್.

ಇದನ್ನೂ ಓದಿ:‘ಕಾಟೇರ’ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಅಭಿಮಾನಿಗಳ ಆಮಂತ್ರಿಸಿದ ದರ್ಶನ್

ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮಂದಿ ಬಗ್ಗೆ ಮಾತನಾಡಿದ ನಟ ದರ್ಶನ್, ‘‘ನನ್ನ ಯಾವುದೇ ಸಿನಿಮಾ ಆದರೂ ಅದರ ಒಂದು ಕಾರ್ಯಕ್ರಮವನ್ನು ಉತ್ತರ ಕರ್ನಾಟಕದಲ್ಲಿ ಇಡುತ್ತೇನೆ. ಉತ್ತರ ಕರ್ನಾಟಕ ಎಂಬುದು ಚಿತ್ರರಂಗಕ್ಕೆ ಹೃದಯ ಇದ್ದಂತೆ. ಕಲಾವಿದರಿಗೆ ಅಪಾರ ಗೌರವ ಕೊಡುವ ಜನ ಅವರು. ಕಲಾವಿದನನ್ನು ಎಂದಿಗೂ ಖಾಲಿ ಹೊಟ್ಟೆಯಲ್ಲಿ ಅವರು ಮಲಗಿಸುವುದಿಲ್ಲ, ಅದು ಸಿನಿಮಾ ಆಗಿರಲಿ, ನಾಟಕವಾಗಿರಲಿ, ಕಲಾವಿದರಿಗೆ ಅಪಾರವಾದ ಪ್ರೀತಿ, ಗೌರವ ತೋರುತ್ತಾರೆ. ಉತ್ತರ ಕರ್ನಾಟಕ ಮಂದಿಗೆ, ಕಲಾವಿದರು ತಮ್ಮ ಚರ್ಮ ತೆಗೆದು ಚಪ್ಪಲಿ ಮಾಡಿದರೂ ಕಡಿಮೆಯೇ’’ ಎಂದು ಕೊಂಡಾಡಿದರು.

ಸಿನಿಮಾದ ತಂತ್ರಜ್ಞರ ಬಗ್ಗೆ ಮಾತನಾಡಿದ ದರ್ಶನ್, ‘‘ತರುಣ್ ಸುಧೀರ್ ಬಹಳ ಒಳ್ಳೆಯ ನಿರ್ದೇಶಕ, ಅವರು ನಿರ್ದೇಶಿಸಿದ ‘ಚೌಕ’, ‘ರಾಬರ್ಟ್’ ಸಿನಿಮಾಗಳು ಬೇರೆ ರೀತಿಯಾಗಿತ್ತು, ಈಗ ಮಾಡಿರುವ ‘ಕಾಟೇರ’ ಸಿನಿಮಾ ಬೇರೆಯದ್ದೇ ರೀತಿಯಲ್ಲಿದೆ’’ ಎಂದರು. ನಿರ್ಮಾಪಕ ರಾಕ್​ಲೈನ್ ಬಗ್ಗೆ ಮಾತನಾಡಿ, ‘‘ಗುಣಮಟ್ಟಕ್ಕೆ ಬಹಳ ಆದ್ಯತೆ ನೀಡುವ ವ್ಯಕ್ತಿ ರಾಕ್​ಲೈನ್ ವೆಂಕಟೇಶ್, ಇದು ಅವರೊಟ್ಟಿಗೆ ನನ್ನ ಎರಡನೇ ಸಿನಿಮಾ. ಇನ್ನೂ ಹಲವು ಸಿನಿಮಾಗಳನ್ನು ನಾವು ಒಟ್ಟಿಗೆ ಮಾಡಬೇಕಿದೆ’’ ಎಂದರು. ಸಿನಿಮಾದ ನಾಯಕಿ ರಾಧನಾ, ‘‘ಮಾಲಾಶ್ರೀ ಪುತ್ರಿ ರಾಧನಾ ನಮ್ಮ ಸಿನಿಮಾದ ನಾಯಕಿ, ಇದು ಅವರ ಮೊದಲ ಸಿನಿಮಾ ಈ ಸಿನಿಮಾದ ಪ್ರತಿ ದೃಶ್ಯಕ್ಕೂ ತಯಾರಿ ಮಾಡಿಕೊಂಡು ಕ್ಯಾಮೆರಾ ಎದುರಿಸಿದ್ದಾರೆ. ಅವರೊಬ್ಬ ಒಳ್ಳೆಯ ನಟಿ ಎಂದರು. ಅಲ್ಲದೆ, ಸಿನಿಮಾದಲ್ಲಿ ನಟಿಸಿರುವ ಇತರೆ ಪ್ರಮುಖ ನಟ, ನಟಿಯರ ಹೆಸರು ಹೇಳಿ ಅವರ ನಟನೆಯನ್ನು ಕೊಂಡಾಡಿದರು ದರ್ಶನ್. ‘ಕಾಟೇರ’ ಸಿನಿಮಾ ಡಿಸೆಂಬರ್ 29ಕ್ಕೆ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ