ಗೃಹಭಂಗ ಶೂಟಿಂಗ್ ನೋಡಲು ಬರುತ್ತಿದ್ದ ಎಸ್​ಎಲ್​ ಭೈರಪ್ಪ: ಆ ದಿನಗಳ ನೆನೆದ ಮಾಳವಿಕಾ

Updated on: Sep 24, 2025 | 6:38 PM

ಹಿರಿಯ ಲೇಖಕ ಎಸ್​ಎಲ್​ ಭೈರಪ್ಪ ಅವರು ಹೃದಯಾಘಾತದಿಂದ ಇಂದು (ಸೆ.24) ನಿಧನರಾಗಿದ್ದಾರೆ. ನಟಿ ಮಾಳವಿಕಾ ಅವಿನಾಶ್ ಅವರು ಅಂತಿಮ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಗೃಹಭಂಗ ಧಾರಾವಾಹಿಯ ಶೂಟಿಂಗ್ ಸಂದರ್ಭವನ್ನು ಮಾಳವಿಕಾ ಅವರು ನೆನಪು ಮಾಡಿಕೊಂಡರು.

ಇಂದು (ಸೆಪ್ಟೆಂಬರ್ 24) ಹೃದಯಾಘಾತದಿಂದ ಎಸ್​ಎಲ್​ ಭೈರಪ್ಪ (SL Bhyrappa) ಅವರು ನಿಧನರಾಗಿದ್ದಾರೆ. ನಟಿ ಮಾಳವಿಕಾ ಅವಿನಾಶ್ ಅವರು ಅಂತಿಮ ದರ್ಶನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ‘ಭೈರಪ್ಪ ಅವರು ಗೃಹಭಂಗ ಧಾರಾವಾಹಿಯ ಚಿತ್ರೀಕರಣಕ್ಕೆ ಬರುತ್ತಿದ್ದರು. ಗೃಹಭಂಗ ಬಗ್ಗೆ ಅವರಿಗೆ ವಿಶೇಷವಾದ ಪ್ರೀತಿ ಇತ್ತು. ಒಂದು ರೀತಿಯಲ್ಲಿ ಅದು ಅವರ ಆತ್ಮಕಥೆ ಆಗಿತ್ತು. ಅವರ ಸೋದರತ್ತೆ ಪಾತ್ರವನ್ನು ನಾನು ಮಾಡಿದ್ದೆ. ಅನೇಕ ಗಂಟೆಗಳ ಕಾಲ ಅವರ ಜೊತೆ ಮಾತನಾಡಿದ್ದು ಈಗ ನೆನಪಿಗೆ ಬರುತ್ತಿದೆ. ಅವರ ರೀತಿ ಈ ಹಿಂದೆ ಯಾರೂ ಇರಲಿಲ್ಲ, ಮುಂದೆಯೋ ಇರುವುದಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮಾಳವಿಕಾ ಅವಿನಾಶ್ (Malavika Avinash) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More