ಮತ್ತೊಮ್ಮೆ ಕೋಟ್ಯಧಿಪತಿಯಾದ ಮಲೆ ಮಹದೇಶ್ವರ: ಮಾದಪ್ಪನ ಹುಂಡಿಯಲ್ಲಿ ಸಿಕ್ತು 1.94 ಕೋಟಿ ರೂ.
ಮಲೆ ಮಹದೇಶ್ವರ ಬೆಟ್ಟದ ಮಾದಪ್ಪ ಮತ್ತೆ ಕೋಟ್ಯಾಧಿಪತಿಯಾಗಿದ್ದಾನೆ. ಅಂದಹಾಗೆ, ಈ ಬಾರಿ ಕೇವಲ 28 ದಿನಗಳಲ್ಲಿ 1.94ಕೋಟಿ ರೂಪಾಯಿ ಸಂಗ್ರಹವಾಗಿದೆ. ಹುಂಡಿ ಎಣಿಕೆ ಕಾರ್ಯ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ನಡೆಯಿತು. ವಿಡಿಯೋ ಇಲ್ಲಿದೆ.
ಚಾಮರಾಜನಗರ, ಫೆಬ್ರವರಿ 21: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿರುವ ಮಲೆ ಮಹದೇಶ್ವರ ದೇಗುಲದ ಹುಂಡಿ ಎಣಿಕೆ ನಡೆದಿದ್ದು, 1.94 ಕೋಟಿ ರೂ. ಸಂಗ್ರವಾಗಿದೆ. ಇದರೊಂದಿಗೆ ಮಾದಪಪ್ಪ ಮತ್ತೆ ಕೋಟ್ಯಧಿಪತಿಯಾದಂತಾಗಿದೆ. ಅಂದಹಾಗೆ, ಇಷ್ಟು ಮೊತ್ತ ಸಂಗ್ರವಾಗಿದ್ದು ಕೇವಲ 28 ದಿನಗಳಲ್ಲಿ ಎಂಬುದು ಗಮನಾರ್ಹ. ಹುಂಡಿ ಹಣ ಅಷ್ಟೇ ಅಲ್ಲದೆ, 63 ಗ್ರಾಂ ಚಿನ್ನ, ಅರ್ಧ ಕೆಜಿ ಬೆಳ್ಳಿ ಸಂಗ್ರಹವಾಗಿದೆ.
ಮಾದಪ್ಪನಿಗೆ ಭಕ್ತರು ಹರಕೆ ರೂಪದಲ್ಲಿ ಹಣ ಹಾಗೂ ಚಿನ್ನ ಬೆಳ್ಳಿ ಅರ್ಪಿಸುತ್ತಾರೆ. ಮಲೆ ಮಹದೇಶ್ವರ ಪ್ರಾಧಿಕಾರದಿಂದ ಹುಂಡಿ ಎಣಿಕೆ ಕಾರ್ಯ ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ನಡೆಯಿತು.