ರಾಜ್ಯ ರಾಜಕಾರಣಕ್ಕೆ ಬರೋದಾಗಿ ಮಲ್ಲಿಕಾರ್ಜುನ ಖರ್ಗೆ ಯಾವತ್ತಾದರೂ ಹೇಳಿದ್ದಾರಾ? ಪ್ರಿಯಾಂಕ್ ಖರ್ಗೆ
ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಸಂಪೂರ್ಣವಾಗಿ ಕೇಳುವ ಅವಶ್ಯಕತೆಯಿದೆ, ತನಗೆ ಮುಖ್ಯಮಂತ್ರಿಯಾಗುವ ಅವಕಾಶ ಇತ್ತು ಅಂತ ಹೇಳುವ ಒಂದು ನಿಮಿಷ ಮೊದಲು ಅವರು ಏನು ಹೇಳಿದ್ದಾರೆ, ನಂತರದ ಒಂದು ನಿಮಿಷದಲ್ಲಿ ಏನು ಹೇಳಿದ್ದಾರೆ ಅಂತ ಅರ್ಥಮಾಡಿಕೊಳ್ಳಬೇಕು, ವ್ಹಾಟ್ಸ್ಯಾಪ್ ನಲ್ಲಿ ಹರಿದಾಡುತ್ತಿರುವ ಒಂದು ತುಣುಕನ್ನು ಎತ್ತಿಕೊಂಡು ನಿರ್ಣಯಗಳಿಗೆ ಬರಬಾರದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕಲಬುರಗಿ, ಜುಲೈ 29: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ರಾಜ್ಯ ರಾಜಕಾರಣಕ್ಕೆ ಬರುತ್ತಾರಾ? ಅವರನ್ನು ಮುಖ್ಯಮಂತ್ರಿ ಮಾಡಲಾಗುತ್ತದೆಯೇ? ಅಂತ ಹರಿದಾಡುತ್ತಿರುವ ಪ್ರಶ್ನೆಗಳಿಗೆ ಅವರ ಮಗ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಸಿಡುಕಿನಿಂದ ಉತ್ತರ ಕೊಟ್ಟಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಲೋಕ ಸಭಾ ಚುನಾವಣೆ ನಡೆಯುವಾಗ ಮಾಧ್ಯಮದವರು ಖರ್ಗೆ ಅವರನ್ನು ಪ್ರಧಾನ ಮಂತ್ರಿ ಮಾಡುತ್ತಾರೆ, ರಾಜ್ಯದಲ್ಲ ಏನಾದರೂ ರಾಜಕೀಯ ಬೆಳವಣಿಗೆ ನಡೆದರೆ ಅವರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎಂದು ಹೇಳಿದರು. ಖರ್ಗೆ ಅವರು ಹೇಳಿದ್ದೇ ಒಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರೋದು ಮತ್ತೊಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿಯಾಗಲು ಅರ್ಹರು ಎಂದ ಶಾಸಕ ಬಸವರಾಜ ರಾಯರೆಡ್ಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

