Who would be CM? ಇಂದೇ ಎಐಸಿಸಿ ಕಛೇರಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ ಜೊತೆ ಪ್ರತ್ಯೇಕವಾಗಿ ಮಾತಾಡಲಿರುವ ಮಲ್ಲಿಕಾರ್ಜುನ ಖರ್ಗೆ

|

Updated on: May 16, 2023 | 6:45 PM

ಖರ್ಗೆ ಅವರು ಇಬ್ಬರು ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತಿಕತೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ. ಇನ್ನೊಂದೆರಡು ಗಂಟೆಗಳಲ್ಲಿ ರಾಜ್ಯದ ಹೊಸ ಮುಖ್ಯಮಂತ್ರಿಯ ಘೋಷಣೆಯಾಗಬಹುದು.

ದೆಹಲಿ: ಕರ್ನಾಟಕ ಮುಖ್ಯಮಂತ್ರಿ (chief minister) ಯಾರು ಅನ್ನೋ ವಿಚಾರ ಪ್ರಾಯಶಃ ಅಂತಿಮ ಹಾಗೂ ನಿರ್ಣಾಯಕ ಘಟ್ಟ ತಲುಪಿದೆ ಮಾರಾಯ್ರೇ. ಯಾಕೆ ಇದನ್ನು ಹೇಳುತ್ತಿದ್ದೇವೆ ಅಂದರೆ, ದೆಹಲಿಯಲ್ಲಿ ಈಗ್ಗೆ ಸ್ವಲ್ಪ ಹೊತ್ತು ಮುಂಚೆ ಡಿಕೆ ಶಿವಕುಮಾರ್ (DK Shivakumar), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಭೇಟಿಯಾಗಲು ಅವರ ನಿವಾಸಕ್ಕೆ ತೆರಳಿದರು. ಅದಕ್ಕೂ ಮೊದಲು ಖರ್ಗೆ ಅವರು ಸಿದ್ದರಾಮಯ್ಯರನ್ನು (Siddaramaiah) ಎಐಸಿಸಿ ಕಚೇರಿಗೆ ಬರುವಂತೆ ಹೇಳಿದ್ದಾರೆ. ಖರ್ಗೆ ಅವರು ಇಬ್ಬರು ನಾಯಕರೊಂದಿಗೆ ಪ್ರತ್ಯೇಕವಾಗಿ ಮಾತಿಕತೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ. ಇನ್ನೊಂದೆರಡು ಗಂಟೆಗಳಲ್ಲಿ ರಾಜ್ಯದ ಹೊಸ ಮುಖ್ಯಮಂತ್ರಿಯ ಘೋಷಣೆಯಾಗಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ