ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾತಾಡುವಷ್ಟು ದೊಡ್ಡವ ನಾನಲ್ಲ, ನನ್ನ ಮಾತುಗಳಿಂದ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ: ಆರಗ ಜ್ಞಾನೇಂದ್ರ

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾತಾಡುವಷ್ಟು ದೊಡ್ಡವ ನಾನಲ್ಲ, ನನ್ನ ಮಾತುಗಳಿಂದ ಅವರ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ: ಆರಗ ಜ್ಞಾನೇಂದ್ರ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 02, 2023 | 6:10 PM

ತಿಪಟೂರುನಲ್ಲಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಈಶ್ವರ್ ಖಂಡ್ರೆ ಮತ್ತು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಿಸಿ ನಿಂದಿಸಿದ್ದರು.

ಬೆಂಗಳೂರು: ವೇದಿಕೆ ಹತ್ತಿದಾಗ, ಕೈಗೆ ಮೈಕ್ ಸಿಕ್ಕಾಗ ವೀರಾವೇಶದಲ್ಲಿ ಮಾತಾಡುವ ನಮ್ಮ ನಾಯಕರು ಅದೇ ಭರದಲ್ಲಿ ಕೆಲ ಅಪಶಬ್ದಗಳನ್ನು ಪ್ರಯೋಗಿಸಿಬಿಡುತ್ತಾರೆ. ಈ ಪ್ರವೃತ್ತಿ ಪಕ್ಷಾತೀತವಾದದ್ದು! ಅಂದರೆ ಎಲ್ಲ ಪಕ್ಷಗಳ ನಾಯಕರು ಹಾಗೆ ಮಾಡುತ್ತಾರೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಇತ್ತೀಚಿಗೆ ಕಸ್ತೂರಿ ರಂಗನ್ ವರದಿ (Kasturirangan report) ಜಾರಿಗೆ ಸರ್ಕಾರ ಬದ್ಧವಾಗಿದೆ ಅಂತ ಹೇಳಿದ್ದರು. ಇದೇ ಹಿನ್ನೆಲೆಯಲ್ಲಿ ತಿಪಟೂರುನಲ್ಲಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಖಂಡ್ರೆ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಿಸಿ ನಿಂದಿಸಿದ್ದರು. ಅವರ ಕಾಮೆಂಟ್ ಗಳಿಗೆ ಕಾಂಗ್ರೆಸ್ ನಾಯಕರು ಉಗ್ರವಾಗಿ ಪ್ರತಿಕ್ರಿಯಿಸಲಾರಂಭಿಸಿದ ಬಳಿಕ ಜ್ಞಾನೇಂದ್ರ ಅವರಿಗೆ ತಮ್ಮ ತಪ್ಪನ ಅರಿವಾಗಿದೆ. ಬೆಂಗಳೂರಲ್ಲಿ ಇಂದು ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ರಾಜ್ಯದ ಹಿರಿಯ ಮುತ್ಸದ್ದಿ, ಅವರನ್ನು ಟೀಕಿಸುವ ಯೋಗ್ಯತೆ ನನಗಿದೆ ಅಂತ ಭಾವಿಸುವುದಿಲ್ಲ, ಅವರ ವಿರುದ್ಧ ನಾನು ಮಾತಾಡಿಲ್ಲ, ಅಷ್ಟಾಗಿಯೂ ನನ್ನ ಮಾತಿಗಳಿಂದ ಖರ್ಗೆ ಮತ್ತು ಖಂಡ್ರೆ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಅಂತ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ