ಮೊದಲ ಬಾರಿ ಗಟ್ಟಿಯಾಗಿ ಮಾತಾಡಿದ ಮಾಳು ನಿಪನಾಳ: ಅಭಿಮಾನಿಗಳು ಫುಲ್ ಖುಷ್

Updated on: Nov 06, 2025 | 3:43 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಶುರು ಆದಾಗಿಂದ ಮಾಳು ನಿಪನಾಳ ಬಗ್ಗೆ ಇದ್ದ ದೂರು ಒಂದೇ ಒಂದು. ಎಲ್ಲರ ಜತೆ ಅವರು ಮಾತಾಡಲ್ಲ ಎಂಬುದೇ ಆ ದೂರು. ಆದರೆ ಮಾಳು ನಿಪನಾಳ ಅವರು ಈಗ ಬಾಯಿ ಬಿಡಲು ಆರಂಭಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಆರಂಭ ಆದಾಗಿನಿಂದ ಮಾಳು ನಿಪನಾಳ ಅವರ ಬಗ್ಗೆ ಇದ್ದ ದೂರು ಒಂದೇ. ಅವರು ಎಲ್ಲರ ಜೊತೆ ಮಾತನಾಡುವುದಿಲ್ಲ ಎಂಬುದೇ ಆ ದೂರು. ಆದರೆ ಈಗ ಮಾಳು ನಿಪನಾಳ ಅವರು ಬಾಯಿ ಬಿಡಲು ಆರಂಭಿಸಿದ್ದಾರೆ. ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಯಾವುದೇ ಟಾಸ್ಕ್ ನೀಡಿಲ್ಲ. ಬೇರೆ ಬೇರೆ ಅಂಶಗಳ ಆಧಾರದ ಮೇಲೆ ಸ್ಪರ್ಧಿಗಳ ಆಟವನ್ನು ಅಳೆಯಲಾಗುತ್ತಿದೆ. ಮುಂದಿನ ವಾರದ ಕ್ಯಾಪ್ಟನ್ ಯಾರಾಗಬೇಕು ಎಂಬುದು ನಿರ್ಧರಿಸಲು ಜನರು ವೋಟ್ ಮಾಡಲು ಬಿಗ್ ಬಾಸ್ ಮನೆಯ ಒಳಗೆ ಬಂದಿದ್ದಾರೆ. ಜನರ ಎದುರಿನಲ್ಲಿ ಮಾಳು ನಿಪನಾಳ (Malu Nipanal) ಖಡಕ್ ಆಗಿ ಮಾತನಾಡಿದ್ದಾರೆ. ‘ಕ್ಯಾಪ್ಟನ್ ಆಗುತ್ತೇನೆ. ಹಳ್ಳಿ ಹುಡುಗನ ಗತ್ತು, ಗಮ್ಮತ್ತು, ತಾಕತ್ತು ತೋರಿಸಿಯೇ ತೋರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ. ಅವರ ಮಾತು ಕೇಳಿ ವೀಕ್ಷಕರಿಗೆ ಖುಷಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.