ಮದ್ಯದ ನಶೆಯಲ್ಲಿ ಕುಡುಕನ ಹುಚ್ಚಾಟ: ಎಟಿಎಂಗೆ ನುಗ್ಗಿ ದಾಂಧಲೆ, ಎಲ್ಲ ಪೀಸ್​​ ಪೀಸ್​​

Updated By: ಪ್ರಸನ್ನ ಹೆಗಡೆ

Updated on: Dec 01, 2025 | 2:28 PM

ತುಮಕೂರಿನ ತುರುವೇಕೆರೆಯಲ್ಲಿ ಎಟಿಎಂ ಧ್ವಂಸಗೊಂಡಿರೋದು ಸ್ಥಳೀಯರ ಗಮನಕ್ಕೆ ಬಂದಿತ್ತು. ಈ ಹಿನ್ನಲೆ ಅವರು ನೀಡಿದ್ದ ದೂರು ಆಧರಿಸಿ, ಇದೊಂದು ಕಳ್ಳತನ ಕೇಸ್​​ ಎಂದು ಪೊಲೀಸರು ತನಿಖೆಗೆ ಇಳಿದಿದ್ದರು. ಈ ವೇಳೆ ಖಾಕಿಗೇ ಆಘಾತವಾಗಿದೆ. ಇದು ಕಳ್ಳತನವನ್ನ ಕುಡುಕನ ಹುಚ್ಚಾಟ ಎಂಬುದು ಗೊತ್ತಾಗಿದ್ದು, ಆರೋಪಿಯನ್ನ ಬಂಧಿಸಲಾಗಿದೆ.

ತುಮಕೂರು, ಡಿಸೆಂಬರ್​​ 01: ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಎಸ್​​ಬಿಐ ಎಟಿಎಂ ಧ್ವಂಸಗೊಳಿಸಿರುವ ಘಟನೆ ತುಮಕೂರಿನ ತುರುವೇಕೆರೆಯಲ್ಲಿ ನಡೆದಿದೆ. ನಶೆಯ ಅಮಲಿನಲ್ಲಿದ್ದ ವಡಿವೇಲು ಸ್ವಾಮಿ ಎಂಬಾತ, ಎಟಿಎಂಗೆ ತೆರಳಿದ್ದ. ಈ ವೇಳೆ ಆತ ಹಣ ಡ್ರಾ ಮಾಡಲು ಯತ್ನಿಸಿದಾಗ, ದುಡ್ಡು ಬಂದಿರಲಿಲ್ಲ. ಹೀಗಾಗಿ ರೊಚ್ಚಿಗೆದ್ದ ವಡಿವೇಲು ಸ್ವಾಮಿ, ಕಲ್ಲಿನಿಂದ ಹೊಡೆದು ಎಟಿಎಂ ಧ್ವಂಸಗೊಳಿಸಿದ್ದ. ನವೆಂಬರ್​​ 27ರ ರಾತ್ರಿ ಘಟನೆ ನಡೆದಿತ್ತು. ಸ್ಥಳೀಯರ ದೂರಿನ ಅನ್ವಯ ಇದು ಕಳ್ಳತನ ಆಗಿರಬಹುದೆಂದು ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಕುಡುಕ ಮಹಾಶಯನ ಕೃತ್ಯ ಕಂಡು ಪೊಲೀಸರೇ ಶಾಕ್​​ ಆಗಿದ್ದಾರೆ. ಸಿಸಿಟಿವಿ ಪರಿಶೀಲನೆ ವೇಳೆ ಕುಡುಕನ ಹುಚ್ಚಾಟ ಬಯಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.