AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುತ್ತೂರು: ಇಎನ್​ಟಿ ಕ್ಲಿನಿಕ್​ಗೆ ನುಗ್ಗಿ ಸಿಬ್ಬಂದಿ ಮೇಲೆ ಮನಸೋ ಇಚ್ಛೆ ಹಲ್ಲೆ

ಪುತ್ತೂರು: ಇಎನ್​ಟಿ ಕ್ಲಿನಿಕ್​ಗೆ ನುಗ್ಗಿ ಸಿಬ್ಬಂದಿ ಮೇಲೆ ಮನಸೋ ಇಚ್ಛೆ ಹಲ್ಲೆ

ಅಶೋಕ್​ ಪೂಜಾರಿ, ಮಂಗಳೂರು
| Updated By: ಪ್ರಸನ್ನ ಹೆಗಡೆ|

Updated on: Dec 02, 2025 | 4:20 PM

Share

ಇಎನ್​ಟಿ ಕ್ಲಿನಿಕ್​ಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ವ್ಯಕ್ತಿಯೋರ್ವ ಅಟ್ಟಹಾಸ ನಡೆಸಿರುವ ಘಟನೆ ಪುತ್ತೂರು ತಾಲೂಕಿನ ದಬರಬೆಯಲ್ಲಿ ನಡೆದಿದೆ. ತನ್ನ ಪರಿಚಯಸ್ಥರನ್ನು ತಪಾಸಣೆಗೆ ಬೇಗ ಬಿಟ್ಟಿಲ್ಲ ಎಂದು ರೊಚ್ಚಿಗೆದ್ದ ವ್ಯಕ್ತಿ, ಕ್ಲಿನಿಕ್​​ ಸಿಬ್ಬಂದಿ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿದ್ದಾನೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿರೋ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು, ಡಿಸೆಂಬರ್​​ 02: ಪರಿಚಯಸ್ಥರನ್ನು ತಪಾಸಣೆಗೆ ಬೇಗ ಒಳಗೆ ಬಿಟ್ಟಿಲ್ಲವೆಂದು ಇಎನ್​ಟಿ ಕ್ಲಿನಿಕ್​ಗೆ ನುಗ್ಗಿ ಸಿಬ್ಬಂದಿ ಮೇಲೆ ದುಷ್ಕರ್ಮಿಯೋರ್ವ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ದರ್ಬೆಯಲ್ಲಿ ನಡೆದಿದೆ. ಡಾ.ರಾಮಮೋಹನ ರಾವ್​ರವರ ಕ್ಲಿನಿಕ್​ಗೆ ನುಗ್ಗಿದ ಬಪ್ಪಳಿಗೆ ನಿವಾಸಿ ಇಬ್ರಾಹಿಂ, ಸಿಬ್ಬಂದಿ ಶ್ರೀಕಾಂತ್ ಮೇಲೆ ಹಲ್ಲೆ ನಡೆಸಿ ಗ್ಲಾಸ್ ಪುಡಿಪುಡಿಗೈದಿದ್ದಾನೆ. ಅಲ್ಲದೆ ಕ್ಲಿನಿಕ್​ಗೆ ಬಂದಿದ್ದವರನ್ನು ಬೆದರಿಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎನ್ನಲಾಗಿದೆ. ನವೆಂಬರ್ 29ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕ್ಲಿನಿಕ್​​ಗೆ ನುಗ್ಗಿ ದಾಂಧಲೆ ನಡೆಸಿದ ಇಬ್ರಾಹಿಂ ವಿರುದ್ಧ ಕೇಸ್ ದಾಖಲಾಗಿದ್ದು, ಸಿಸಿಕ್ಯಾಮರಾ ದೃಶ್ಯ ಆಧರಿಸಿ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.