ಬೆಂಗಳೂರಿನಲ್ಲಿ ಹೋಟೆಲ್ ಬಳಿ ಬಂದು ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆ
ಕೋರಮಂಗಲ ಪೊಲೀಸ್ ಠಾಣೆಯ ಬಳಿ ಹೋಟೆಲ್ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ. ಮಧ್ಯರಾತ್ರಿ 2.30ಕ್ಕೆ ಹೋಟೆಲ್ ಬಳಿ KA51 MG 9786 ಸಂಖ್ಯೆಯ ಆಡಿ ಕಾರು ಬಂದು ನಿಂತಿದ್ದು, ಬೆಳಗ್ಗೆ ಸಿಬ್ಬಂದಿ ಹೋಟೆಲ್ ಓಪನ್ ಮಾಡಲು ಬಂದಿದ್ದಾರೆ. ಆಗ ಕಾರು ನಿಂತಿದ್ದು ಗಮನಿಸಿ ಒಳಗಿದ್ದ ವ್ಯಕ್ತಿಯನ್ನು ಎಬ್ಬಿಸಲು ಬಂದಾಗ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಹೀಗಾಗಿ ಹೋಟೆಲ್ ಸಿಬ್ಬಂದಿ ಮಾಹಿತಿ ಮೇರೆಗೆ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ಗೊತ್ತಾಗಿದೆ.
ಬೆಂಗಳೂರು. (ಸೆಪ್ಟೆಂಬರ್ 20): ಕೋರಮಂಗಲ ಪೊಲೀಸ್ ಠಾಣೆಯ ಬಳಿ ಹೋಟೆಲ್ ಬಳಿ ನಿಂತಿದ್ದ ಆಡಿ ಕಾರಿನಲ್ಲಿ ಮೃತದೇಹ ಪತ್ತೆಯಾಗಿದೆ. ಮಧ್ಯರಾತ್ರಿ 2.30ಕ್ಕೆ ಹೋಟೆಲ್ ಬಳಿ KA51 MG 9786 ಸಂಖ್ಯೆಯ ಆಡಿ ಕಾರು ಬಂದು ನಿಂತಿದ್ದು, ಬೆಳಗ್ಗೆ ಸಿಬ್ಬಂದಿ ಹೋಟೆಲ್ ಓಪನ್ ಮಾಡಲು ಬಂದಿದ್ದಾರೆ. ಆಗ ಕಾರು ನಿಂತಿದ್ದು ಗಮನಿಸಿ ಒಳಗಿದ್ದ ವ್ಯಕ್ತಿಯನ್ನು ಎಬ್ಬಿಸಲು ಬಂದಾಗ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಹೀಗಾಗಿ ಹೋಟೆಲ್ ಸಿಬ್ಬಂದಿ ಮಾಹಿತಿ ಮೇರೆಗೆ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ವ್ಯಕ್ತಿ ಮೃತಪಟ್ಟಿರುವುದು ಗೊತ್ತಾಗಿದೆ. ಪರಿಶೀಲನೆ ವೇಳೆ ಮೃತನ ಹೆಸರು ಅಕ್ಬರ್ ಎನ್ನುವುದು ಗೊತ್ತಾಗಿದ್ದು, ಮೇಲ್ನೋಟಕ್ಕೆ ಹೃದಯಾಘಾತ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸೋಕೋ ಟೀಂ, ಕೋರಮಂಗಲ ಪೊಲೀಸರಿಂದ ಪರಿಶೀಲನೆ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
