ಬೇಟೆಗಾಗಿ ಬಳಸುವ ಮೇಕೆ ಕದಿಯುವಾಗ ಚಿರತೆಯ ಬೋನಿನಲ್ಲಿ ಸಿಕ್ಕಿಬಿದ್ದ ವ್ಯಕ್ತಿ!

Updated on: Nov 28, 2025 | 11:08 PM

ಬಹ್ರೈಚ್‌ನಲ್ಲಿ ಬೇಟೆಗಾಗಿ ಬಳಸಲಾಗುತ್ತಿದ್ದ ಮೇಕೆಯನ್ನು ಕದಿಯಲು ಪ್ರಯತ್ನಿಸುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿ ಚಿರತೆ ಬೋನಿನಲ್ಲಿ ಸಿಕ್ಕಿಬಿದ್ದಿದ್ದಾನೆ. ಫಖರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಉಮ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿರತೆಯನ್ನು ಹಿಡಿಯಲು ಬೋನಿನ ಒಳಗೆ ಕಟ್ಟಿದ್ದ ಮೇಕೆಯನ್ನು ಕದಿಯುವ ಉದ್ದೇಶದಿಂದ ತಡರಾತ್ರಿ ಆ ವ್ಯಕ್ತಿ ಬೋನಿನ ಕಡೆಗೆ ನುಸುಳಿದ್ದಾನೆ. ಮೇಕೆಯನ್ನು ನೋಡಿ ಆಮಿಷಕ್ಕೆ ಆತ ಬೋನಿನೊಳಗೆ ಪ್ರವೇಶಿಸಿದ್ದಾನೆ. ಅದರ ಒಳಗೆ ಕಾಲಿಟ್ಟ ತಕ್ಷಣ, ಬೋನಿನ ಸ್ವಯಂಚಾಲಿತ ಬಾಗಿಲು ಮುಚ್ಚಿಕೊಂಡು ಸಿಕ್ಕಿಬಿದ್ದಿದ್ದಾನೆ.

ಬಹ್ರೈಚ್, ನವೆಂಬರ್ 28: ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹಾಕಿದ್ದ ಬೋನಿನಲ್ಲಿ ಆಕಸ್ಮಿಕವಾಗಿ ವ್ಯಕ್ತಿಯೊಬ್ಬ ಸಿಲುಕಿಕೊಂಡ ವಿಚಿತ್ರ ಘಟನೆ ನಡೆದಿದೆ. ಫಖರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಉಮ್ರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿರತೆಯನ್ನು (Leopard) ಹಿಡಿಯಲು ಬೋನಿನ ಒಳಗೆ ಕಟ್ಟಿದ್ದ ಮೇಕೆಯನ್ನು ಕದಿಯುವ ಉದ್ದೇಶದಿಂದ ತಡರಾತ್ರಿ ಆ ವ್ಯಕ್ತಿ ಬೋನಿನ ಕಡೆಗೆ ನುಸುಳಿದ್ದಾನೆ. ಮೇಕೆಯನ್ನು ನೋಡಿ ಆಮಿಷಕ್ಕೆ ಆತ ಬೋನಿನೊಳಗೆ ಪ್ರವೇಶಿಸಿದ್ದಾನೆ. ಅದರ ಒಳಗೆ ಕಾಲಿಟ್ಟ ತಕ್ಷಣ, ಬೋನಿನ ಸ್ವಯಂಚಾಲಿತ ಬಾಗಿಲು ಮುಚ್ಚಿಕೊಂಡು ಸಿಕ್ಕಿಬಿದ್ದಿದ್ದಾನೆ.

ಆತ ಬಾಗಿಲು ತೆರೆಯಲು ಪದೇ ಪದೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಹಲವಾರು ನಿಮಿಷಗಳ ಕಾಲ ಹೆಣಗಾಡಿದ ನಂತರ ಆತ ಮೊಬೈಲ್ ಫೋನ್ ತೆಗೆದುಕೊಂಡು ಸಹಾಯಕ್ಕಾಗಿ ಪರಿಚಯಸ್ಥರಿಗೆ ಕರೆ ಮಾಡಿದ್ದಾನೆ. ಮಾಹಿತಿ ಪಡೆದ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ವಲ್ಪ ಸಮಯದ ನಂತರ ಅರಣ್ಯ ಸಿಬ್ಬಂದಿ ಆಗಮಿಸಿ, ಬೋನಿನ ಬಾಗಿಲು ತೆರೆದು ಆತನನ್ನು ಬಿಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ