ಸಂಡೇ ಲಾಕ್​ಡೌನ್ ನಡುವೆಯೂ ಕ್ವಾರಂಟೈನ್ ಸೀಲ್ ಹೊಂದಿರೋ ವ್ಯಕ್ತಿ ಓಡಾಟ

| Updated By: ಸಾಧು ಶ್ರೀನಾಥ್​

Updated on: Jul 12, 2020 | 1:00 PM

[lazy-load-videos-and-sticky-control id=”BfjxGuqyFaA”] ಬೆಂಗಳೂರು: ನರ ಹಂತಕ ಕೊರೊನಾ ವೈರಸ್ ಯಾರನ್ನೂ ಬಿಡಬಾರದೆಂದು ಬೆನ್ನು ಹತ್ತಿದ ಬೇತಾಳದಂತೆ ಸಂಚರಿಸುತ್ತಿದೆ. ಹುಡುಕಿ ಹುಡುಕಿ ಜನರ ದೇಹ ಸೇರುತ್ತಿದೆ. ಹೀಗಾಗಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಂಡೇ ಲಾಕ್​ಡೌನ್ ಘೋಷಿಸಿದೆ. ಇಂದು ಇಡೀ ಕರುನಾಡು ಸ್ತಬ್ಧವಾಗಿದೆ. ಆದರೆ ಈ ನಡುವೆ ಕ್ವಾರಂಟೈನ್ ಸೀಲ್ ಹೊಂದಿರೋ ವ್ಯಕ್ತಿ ಆಟೋದಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ಮಲ್ಲೇಶ್ವರಂನಲ್ಲಿ ಪೊಲೀಸರ ತಪಾಸಣೆ ವೇಳೆ ಆತನ ಕೈ ಮೇಲಿದ್ದ ಸೀಲ್​ನಿಂದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ. […]

ಸಂಡೇ ಲಾಕ್​ಡೌನ್ ನಡುವೆಯೂ ಕ್ವಾರಂಟೈನ್ ಸೀಲ್ ಹೊಂದಿರೋ ವ್ಯಕ್ತಿ ಓಡಾಟ
Follow us on

[lazy-load-videos-and-sticky-control id=”BfjxGuqyFaA”]

ಬೆಂಗಳೂರು: ನರ ಹಂತಕ ಕೊರೊನಾ ವೈರಸ್ ಯಾರನ್ನೂ ಬಿಡಬಾರದೆಂದು ಬೆನ್ನು ಹತ್ತಿದ ಬೇತಾಳದಂತೆ ಸಂಚರಿಸುತ್ತಿದೆ. ಹುಡುಕಿ ಹುಡುಕಿ ಜನರ ದೇಹ ಸೇರುತ್ತಿದೆ. ಹೀಗಾಗಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸಂಡೇ ಲಾಕ್​ಡೌನ್ ಘೋಷಿಸಿದೆ.

ಇಂದು ಇಡೀ ಕರುನಾಡು ಸ್ತಬ್ಧವಾಗಿದೆ. ಆದರೆ ಈ ನಡುವೆ ಕ್ವಾರಂಟೈನ್ ಸೀಲ್ ಹೊಂದಿರೋ ವ್ಯಕ್ತಿ ಆಟೋದಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ. ಮಲ್ಲೇಶ್ವರಂನಲ್ಲಿ ಪೊಲೀಸರ ತಪಾಸಣೆ ವೇಳೆ ಆತನ ಕೈ ಮೇಲಿದ್ದ ಸೀಲ್​ನಿಂದ ವ್ಯಕ್ತಿ ಸಿಕ್ಕಿಬಿದ್ದಿದ್ದಾನೆ.

ಕೈಗೆ ಸೀಲ್ ಹಾಕಿದ್ರೂ ಆಟೋದಲ್ಲಿ ಓಡಾಡುತ್ತಿದ್ದಾನೆ. ಕ್ವಾರಂಟೈನ್ ವ್ಯಕ್ತಿ ಯಶವಂತಪುರದಿಂದ ಮಲ್ಲೇಶ್ವರಂ ಮೂಲಕ ಹೆಬ್ಬಗೊಡಿಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಇವತ್ತೇ ಸೀಲ್ ಹಾಕಿರೊದಾಗಿ ಆ ವ್ಯಕ್ತಿ ಹೇಳುತ್ತಿದ್ದಾನೆ. ಸದ್ಯ ಪೊಲೀಸರಿಗೆ ಕ್ವಾರಂಟೈನ್ ವ್ಯಕ್ತಿ ತಲೆನೋವಾಗಿದ್ದಾನೆ.

Published On - 10:16 am, Sun, 12 July 20