ಅಡುಗೆ ವಿಚಾರಕ್ಕೆ ಜಗಳ; ಜೊತೆಗಿದ್ದವನನ್ನು ರೂಂನಲ್ಲೇ ಹೊಡೆದು ಕೊಂದ ಯುವಕ
ಮೃತ ದೀಪು ಆರ್ಥಿಕವಾಗಿ ತೀರಾ ಬಡವನಾಗಿದ್ದ. ಕೆಲವು ಸಮಯದ ಹಿಂದೆ ಅವರು ವಾಸವಿದ್ದ ಮನೆಗಳು ನಾರಾಯಣಿ ನದಿಯಲ್ಲಿ ಕೊಚ್ಚಿ ಹೋಗಿ ಸ್ಥಳಾಂತರಗೊಂಡಿದ್ದರು. ಎಲ್ಲೋ ದೂರದ ಪುಟ್ಟ ಗುಡಿಸಲಿನಲ್ಲಿ ವಾಸಿಸುತ್ತಿದ್ದ. ಹೀಗಾಗಿ ಎರಡು ತಿಂಗಳ ಹಿಂದೆ ಮಹಾರಾಷ್ಟ್ರದ ಪುಣೆಗೆ ಕುಟುಂಬವನ್ನು ಸಾಕಲು ಹೋಗಿದ್ದ. ಈಗ ಆತ ಬರ್ಬರವಾಗಿ ಕೊಲೆಯಾಗಿದ್ದಾನೆ.
ಅಡುಗೆ ಮಾಡುವ ವಿಚಾರದಲ್ಲಿ ಜಗಳ ಉಂಟಾಗಿ ವ್ಯಕ್ತಿಯೊಬ್ಬ ತಮ್ಮ ಜೊತೆಗೆ ವಾಸಿಸುತ್ತಿದ್ದ ಯುವಕನನ್ನು ಕೊಲೆ ಮಾಡಿದ್ದಾನೆ. ತನ್ನ ಜೊತೆಗಿದ್ದವನನ್ನು ರಾಡ್‌ನಿಂದ ಬರ್ಬರವಾಗಿ ಹೊಡೆದು ಕೊಂದಿದ್ದಾನೆ. ಮಹಾರಾಷ್ಟ್ರದ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಸಣ್ಣ ವಿಷಯಕ್ಕೆ ಜಗಳ ನಡೆದು, 19 ವರ್ಷದ ಯುವಕನನ್ನು ಕೊಲೆ ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ, ಚಿಂಚವಾಡದ ವಿಕೆವಿ ಕಂಪನಿಯಲ್ಲಿ ಕೆಲಸ ಮಾಡುವ ಮೂವರು ಒಂದೇ ಕೋಣೆಯಲ್ಲಿ ಉಳಿದುಕೊಂಡಿದ್ದರು. ಆರೋಪಿಯ ಜತೆಗೆ ಮೃತ ದೀಪು ಖಾಸಗಿ ಕಂಪನಿಯಲ್ಲಿ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಮುಖೇಶ್ ಹಾಗೂ ದೀಪು ನಡುವೆ ಅಡುಗೆ ಮಾಡುವ ವಿಚಾರದಲ್ಲಿ ಜಗಳ ನಡೆದಿದೆ. ನಂತರ ಎಲ್ಲರೂ ಮಲಗಿದ್ದಾಗ ಮುಖೇಶ್ ದೀಪು ಮೇಲೆ ಹಲ್ಲೆ ನಡೆಸಿ ರಾಡ್ ನಿಂದ ತಲೆ ಒಡೆದು ಕೊಲೆ ಮಾಡಿದ್ದಾನೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos