Loading video

ಮೈಸೂರಲ್ಲಿ ಕುಟುಂಬದ ಮೂವರಿಗೆ ವಿಷವಿಕ್ಕಿ ನಂತರ ತಾನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ವ್ಯಕ್ತಿ

|

Updated on: Feb 17, 2025 | 10:21 AM

ನಮ್ಮ ಮೈಸೂರು ಪ್ರತಿನಿಧಿ ನೀಡುವ ಮಾಹಿತಿ ಪ್ರಕಾರ ಚೇತನ್ ಮೂವರಿಗೆ ವಿಷವುಣ್ಣಿಸಿ ಕೊಂದು ತಾನು ನೇಣು ಹಾಕಿಕೊಳ್ಳುವ ಮೊದಲು ಸಂಬಂಧಿಕರೊಬ್ಬರಿಗೆ ಧ್ವನಿಸಂದೇಶ ಕಳಿಸಿ ತಾನು ಮಾಡಲಿರುವ ಕೃತ್ಯದ ಬಗ್ಗೆ ಹೇಳಿದ್ದಾರೆ. ಸಂಬಂಧಿಕ ವಾಪಸ್ಸು ಫೋನ್ ಮಾಡಿದಾಗ ಕರೆಗೆ ಉತ್ತರ ಸಿಕ್ಕಿಲ್ಲ. ನಂತರ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಅನಾಹುತ ನಡೆದುಹೋಗಿತ್ತು.

ಮೈಸೂರು: ನಗರದ ವಿಶ್ವೇಶ್ವರನಗರದಲ್ಲಿರುವ ಸಂಕಲ್ಪ್ ಸಿರೀನ್ ಹೆಸರಿನ ಅಪಾರ್ಟ್​ಮೆಂಟ್ ಕಾಂಪ್ಲೆಕ್ಸ್​ನಲ್ಲಿ ಅತ್ಯಂತ ದಾರುಣ ಘಟನೆಯೊಂದು ನಿನ್ನೆ ನಡೆದಿದೆ. ಇಲ್ಲಿನ ಎರಡು ಫ್ಲ್ಯಾಟ್​ಗಳಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಸಾವಿಗೆ ಶರಣಾಗಿದ್ದಾರೆ. ಸತ್ತವರನ್ನು ಕುಟುಂಬದ ಯಜಮಾನ ಚೇತನ್ (45), ಅವರ ಪತ್ನಿ ರೂಪಾಲಿ (43), ಮಗ ಕುಶಾಲ್ (15) ಮತ್ತು ಚೇತನ್ ತಾಯಿ ಪ್ರಿಯಂವದಾ (62) ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಹಾಸನ ಮೂಲದ ಚೇತನ್ ಉಳಿದ ಮೂವರಿಗೆ ವಿಷವುಣ್ಣಿಸಿ ನಂತರ ತಾನು ನೇಣುಬಿಗಿದುಕೊಂಡಿದ್ದಾರೆ. ಅವರ ದೇಹ ನೇತಾಡುವ ಸ್ಥಿತಿಯಲ್ಲಿ ಸಿಕ್ಕರೆ ಉಳಿದವರ ದೇಹಗಳು ನೆಲದ ಮೇಲಿದ್ದವು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ದಂಪತಿ ಆತ್ಮಹತ್ಯೆ, ಸೊಸೆ ತವರು ಮನೆ ಸೇರಿದ್ದಕ್ಕೆ ಸಾವಿಗೆ ಶರಣಾದ್ರಾ?

Published on: Feb 17, 2025 10:15 AM