ಮಲೆಮಹದೇಶ್ವರ ದೇವಸ್ಥಾನದ ಗೋಪುರವೇರಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

Updated By: ವಿವೇಕ ಬಿರಾದಾರ

Updated on: Apr 12, 2025 | 8:39 PM

ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪ ದೇವಸ್ಥಾನದ ಗೋಪುರವೇರಿ ಮೃತ್ಯುಂಜಯ ಎಂಬವರು ಆತ್ಮಹತ್ಯೆಗೆ ಯತ್ನಿಸಿದ್ದರು. "ಉಘೇ ಮಾದಪ್ಪ" ಎಂದು ಕೂಗುತ್ತಾ ಜಿಗಿಯಲು ಯತ್ನಿಸುತ್ತಿದ್ದ ಅವರನ್ನು ದೇವಸ್ಥಾನದ ಸಿಬ್ಬಂದಿ ರಕ್ಷಿಸಿದ್ದಾರೆ. ಮೃತ್ಯುಂಜಯ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಈ ಘಟನೆಯ ದೃಶ್ಯ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಚಾಮರಾಜನಗರ, ಏಪ್ರಿಲ್​ 12: ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿನ (Male Mahadeshwar hill) ಮಾದಪ್ಪನ ದೇವಸ್ಥಾನದ ಗೋಪುರವೇರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಪ್ರಾಧಿಕಾರದ ಸಿಬ್ಬಂದಿ ರಕ್ಷಸಿದ್ದಾರೆ. ಹೆಚ್.ಡಿ.ಕೋಟೆ (HD Kote) ಮೂಲದ ಮೃತ್ಯುಂಜಯ ಎಂಬುವರು ಉಘೇ ಮಾದಪ್ಪ ಎಂದು ಘೋಷಣೆ ಕೂಗಿ ದೇವಸ್ಥಾನದ ಗೋಪುರದ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸುತಿದರು. ಕೂಡಲೇ, ಪ್ರಾಧಿಕಾರದ ಸಿಬ್ಬಂದಿ ಗೋಪುರವೇರಿ ಮೃತ್ಯುಂಜಯ ಅವರನ್ನು ರಕ್ಷಿಸಿ, ಕೆಳಗಿಳಿಸಿದ್ದಾರೆ. ಇನ್ನು, ಮೃತ್ಯುಂಜಯ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಭಕ್ತರೊಬ್ಬರ ಮೊಬೈಲ್​ನಲ್ಲಿ ಮೃತ್ಯುಂಜಯ ಆತ್ಮಹತ್ಯೆಗೆ ಯತ್ನಿಸಿದ ದೃಶ್ಯ ಸೆರೆಯಾಗಿದೆ.