ಎಣ್ಣೆ ಕೊಡಿಸಿಲ್ಲವೆಂದು ಮಚ್ಚು ಹಿಡಿದು ನಡುರಸ್ತೆಯಲ್ಲೇ ವ್ಯಕ್ತಿ ಪುಂಡಾಟ

Edited By:

Updated on: Jan 17, 2026 | 3:10 PM

ಆನೇಕಲ್ ತಾಲೂಕಿನ ಗೌರೇನಹಳ್ಳಿಯಲ್ಲಿ ಕುಡಿದ ಅಮಲಿನಲ್ಲಿ ಬಸವರಾಜ್ ಎಂಬಾತ ಎಣ್ಣೆ ಕೊಡಿಸಿಲ್ಲವೆಂದು ತನ್ನ ಪರಿಚಯಸ್ಥ ಪ್ರಕಾಶ್‌ಗೆ ಮಚ್ಚು ಹಿಡಿದು ನಿಂದಿಸಿ ಪುಂಡಾಟ ನಡೆಸಿದ್ದಾನೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ಥಳೀಯರು ಪೊಲೀಸರ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೇಕಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬೆಂಗಳೂರು, ಜನವರಿ 17: ಪರಿಚಯಸ್ಥ ಎಣ್ಣೆ ಕೊಡಿಸಿಲ್ಲ ಎಂದು ಮಚ್ಚು ಹಿಡಿದು ವ್ಯಕ್ತಿ ಓರ್ವ ನಡುರಸ್ತೆಯಲ್ಲೇ ಪುಂಡಾಟ ಮೆರೆದಿರುವಂತಹ ಘಟನೆ ಬೆಂಗಳೂರು ಬಳಿಯ ಆನೇಕಲ್ ತಾಲೂಕಿನ ಗೌರೇನಹಳ್ಳಿಯಲ್ಲಿ ನಡೆದಿದೆ. ಗೌರೇನಾಹಳ್ಳಿ ಗ್ರಾಮದ ಬಸವರಾಜ್​​​​ ಎಂಬಾತ ಕುಡಿದ ಅಮಲಿನಲ್ಲಿ ಮಚ್ಚು ಹಿಡಿದು ದಾಂದಲೆ ಮಾಡಿದ್ದಾರೆ. ಪರಿಚಯಸ್ಥ ಪ್ರಕಾಶ್​ಗೆ ಬಸವರಾಜ್​​ ಮಚ್ಚು ಹಿಡಿದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಸವರಾಜ್ ಮಚ್ಚುಹಿಡಿದು ಓಡಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪುಂಡರ ಹಾವಳಿಗೆ ಕಡಿವಾಣ ಹಾಕದ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.