Providential escape: ಕಾಡಾನೆಯಿಂದ ಬಚಾವಾಗಲು ವ್ಯಕ್ತಿಯೊಬ್ಬ ಜೀವ ಮತ್ತು ಪ್ಯಾಂಟ್ ಎರಡನ್ನೂ ಕೈಯಲ್ಲಿ ಹಿಡಿದು ಓಡಿದ!
ಘಟನೆ ನಡೆದಿದ್ದು ಜಿಲ್ಲೆಯ ಬಂಡಿಪುರ ಆರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಕೇರಳದ ಮುತ್ತಂಗ ವನ್ಯಜೀವಿಧಾಮದಲ್ಲಿ.
ಚಾಮರಾಜನಗರ: ಪ್ಯಾಂಟ್ ಸೊಂಟದಿಂದ ಜಾರದಂತೆ ಅದನ್ನು ಎರಡೂ ಕೈಯಲ್ಲಿ ಹಿಡಿದು ಬಿದ್ನೋ ಸತ್ನೋ ಅಂತ ಓಡುತ್ತಿರುವ ವ್ಯಕ್ತಿ ನಿಜಕ್ಕೂ ಅದೃಷ್ಟವಂತ. ಅವನ ಹಿಂದೆ ಕಾಡಾನೆಯೊಂದು (wild elephant) ಅಟ್ಟಿಸಿಕೊಂಡು ಬರುತ್ತಿದೆ ಮತ್ತು ಅದರ ದಾಳಿಯಿಂದ ಬಚಾವಾಗಲು ಅವನು ಜೀವ ಮತ್ತು ಪ್ಯಾಂಟ್ ಎರಡನ್ನೂ ಕೈಯಲ್ಲಿ ಹಿಡಿದು ರಸ್ತೆಯ ಕಡೆ ಓಡಿ ಬರುತ್ತಿದ್ದಾನೆ. ನಿಸರ್ಗದ ಕರೆಯನ್ನು (nature’s call) ಅಟೆಂಡ್ ಮಾಡಲು ಅವನು ವಾಹನದಿಂದ ಇಳಿದು ಕಾಡಿನೊಳಗೆ ಹೋಗಿದ್ದ ಅನಿಸುತ್ತೆ. ತನ್ನ ವಾಸಸ್ಥಳದ ವ್ಯಾಪ್ತಿಯಲ್ಲಿ ಅಗಂತುಕನ (intruder) ಅತಿಕ್ರಮಣ ಕಂಡು ಸಹಜವಾಗೇ ಆನೆಗೆ ಕೋಪ ಬಂದಿದೆ. ಓಡುವ ಭರ ಮತ್ತು ಅತಂಕ-ಗಾಬರಿಯಿಂದಾಗಿ ವ್ಯಕ್ತಿ ಒಂದೆರಡು ಸಲ ಮುಗ್ಗುರಿಸಿ ಕೂಡ ಬೀಳುತ್ತಾನೆ. ಅವನ ಅದೃಷ್ಬವೆಂದರೆ ಅಷ್ಟರಲ್ಲಾಗಲೇ ರಸ್ತೆಯ ಸಮೀಪಕ್ಕೆ ಬಂದಿರುತ್ತಾನೆ ಮತ್ತು ಅವನ ಎಡಭಾಗದಿಂದ ಬಂದ ವಾಹನವೊಂದು ಅವನ ರಕ್ಷಣೆಗೆ ಬರುತ್ತದೆ. ವಾಹನದ ಸದ್ದುಕೇಳಿ ಆನೆ ಹಿಂದಡಿಯಿಡುತ್ತದೆ. ಬದುಕಿದೆಯಾ ಬಡಜೀವವೇ ಅಂದುಕೊಳ್ಳುತ್ತಾ ವ್ಯಕ್ತಿ ತನ್ನ ವಾಹನ ಹತ್ತಲು ಹೋಗುತ್ತಾನೆ. ಅಂದಹಾಗೆ, ಈ ಘಟನೆ ನಡೆದಿದ್ದು ಜಿಲ್ಲೆಯ ಬಂಡಿಪುರ ಆರಣ್ಯಪ್ರದೇಶಕ್ಕೆ ಹೊಂದಿಕೊಂಡಿರುವ ಕೇರಳದ ಮುತ್ತಂಗ ವನ್ಯಜೀವಿಧಾಮದಲ್ಲಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ