ಮೈಸೂರು: ಸಿಎಂ ಸಿದ್ದರಾಮಯ್ಯ ನಿವಾಸದ ಮೇಲೆ ಕಲ್ಲೆಸೆದ ಆರೋಪಿ ಸೆರೆ, ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿದ ಜಡ್ಜ್

ಅರುಣ್​ ಕುಮಾರ್​ ಬೆಳ್ಳಿ

Updated on: Oct 11, 2023 | 10:46 AM

ಸತ್ಯಮುರ್ತಿಯನ್ನು ಬಂಧಿಸಲು ಹೋದಾಗ ತೀವ್ರ ಪ್ರತಿರೋಧ ಒಡ್ಡಿದ್ದಾನೆ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಮಹೇಂದ್ರ ಎನ್ನುವವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ. ಸತ್ಯಮೂರ್ತಿಯ ಹಿನ್ನೆಲೆ ಬಗ್ಗೆ ಗೊತ್ತಾಗಿಲ್ಲ. ಅವನೇನು ಕೆಲಸ ಮಾಡಿಕೊಂಡಿದ್ದಾನೆ, ಕಲ್ಲೆಸೆಯಲು ಕಾರಣವೇನು ಮೊದಲಾದ ಸಂಗತಿಗಳನ್ನು ಪೊಲಿಸರು ತಮ್ಮ ವಿಚಾರಣೆಯಲ್ಲಿ ಕಂಡುಕೊಳ್ಳಲಿದ್ದಾ

ಮೈಸೂರು: ಮಂಗಳವಾರದಂದು ದುಷ್ಕರ್ಮಿಯೊಬ್ಬ ನಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ನಿವಾಸದ ಮೇಲೆ ಕಲ್ಲೆಸೆದು ಕಿಟಕಿ ಗಾಜನ್ನು ಪುಡಿಮಾಡಿದ ಪ್ರಕರಣವನ್ನು ವರದಿ ಮಾಡಿದ್ದೇವೆ. ಮೈಸೂರಿನ ಸರಸ್ವತೀಪುರಂ ಠಾಣೆಯ ಪೊಲೀಸರು ಇವತ್ತು ಆರೋಪಿಯನ್ನು ಬಂಧಿಸಿ ಎಫ್ ಐ ಆರ್ (FIR) ದಾಖಲಿಸಿದ್ದಲ್ಲದೆ ನಗರದ 3 ನೇ ಜೆಎಂಎಫ್ಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ. ಆರೋಪಿಯ ಹೆಸರು ಸತ್ಯಮೂರ್ತಿಯಾಗಿದ್ದು (Satyamurthy) ಅವನು ಸ್ಥಳೀಯನೇ ಆಗಿದ್ದಾನೆ. ಕೋರ್ಟ್ ಸತ್ಯಮೂರ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪೊಲೀಸರು ಸತ್ಯಮುರ್ತಿಯನ್ನು ಬಂಧಿಸಲು ಹೋದಾಗ ತೀವ್ರ ಪ್ರತಿರೋಧ ಒಡ್ಡಿದ್ದಾನೆ ಮತ್ತು ಪೊಲೀಸ್ ಇನ್ಸ್ ಪೆಕ್ಟರ್ ಮಹೇಂದ್ರ ಎನ್ನುವವರ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ. ಸತ್ಯಮೂರ್ತಿಯ ಹಿನ್ನೆಲೆ ಬಗ್ಗೆ ಗೊತ್ತಾಗಿಲ್ಲ. ಅವನೇನು ಕೆಲಸ ಮಾಡಿಕೊಂಡಿದ್ದಾನೆ, ಕಲ್ಲೆಸೆಯಲು ಕಾರಣವೇನು ಮೊದಲಾದ ಸಂಗತಿಗಳನ್ನು ಪೊಲಿಸರು ತಮ್ಮ ವಿಚಾರಣೆಯಲ್ಲಿ ಕಂಡುಕೊಳ್ಳಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.