ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ

Edited By:

Updated on: Sep 17, 2024 | 12:02 PM

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಾಡ್ಲಿ ಗ್ರಾಮದಲ್ಲಿ ಮಂಗಳವಾರ ಮಾತನಾಡಿದ ಅವರು, ಧರ್ಮಸ್ಥಳ ಸಂಘದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಏನು ಹೇಳಿದ್ದಾರೆಂಬ ವಿಡಿಯೋ ಇಲ್ಲಿದೆ ನೋಡಿ.

ಮಂಡ್ಯ, ಸೆಪ್ಟೆಂಬರ್ 17: ಹೆಸರಿಗಷ್ಟೇ ಅದು ಧರ್ಮಸ್ಥಳ ಸಂಘ, ಅದರಲ್ಲಿ ಧರ್ಮವೇ ಇಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಸಂಘದಲ್ಲಿ ಧರ್ಮದ ಕೆಲಸವೇ ಇಲ್ಲ. ಕೊಟ್ಟ ಸಾಲಕ್ಕೆ ಬಡವರಿಂದ ಶೇ 40ರಷ್ಟು ಬಡ್ಡಿ ವಸೂಲಿ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

10, 20 ಸಾವಿರ ರೂಪಾಯಿ ಸಾಲ ಪಡೆದು ಹೆಚ್ಚಿಗೆ ಬಡ್ಡಿ ಕಟ್ಟಿಸಿಕೊಳ್ಳುತ್ತಾರೆ. ಆದರೆ, ಜನರಿಗೆ ಇದು ಗೊತ್ತಾಗುತ್ತಿಲ್ಲ. ಅದು ಹೆಸರಿಗಷ್ಟೆ ಧರ್ಮಸ್ಥಳ ಸಂಘ. ಧರ್ಮಸ್ಥಳ ಸಂಘದಲ್ಲಿ ಧರ್ಮದ ಕಾರ್ಯ ನಡೆಯುತ್ತಿಲ್ಲ. ಆ ಶೋಷಣೆ ತಪ್ಪಿಸಲು ತಿಂಗಳಿಗೆ 2 ಸಾವಿರ ಕೊಡುತ್ತಿದ್ದೇವೆ ಎಂದು ನರೇಂದ್ರಸ್ವಾಮಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ