ಮಂಡ್ಯ: ಪಕ್ಕದ ಮನೆಗೆ ನುಗ್ಗಿ ದರೋಡೆ ಮಾಡಿದ್ದ ಮದ್ದೂರು ಪುರಸಭೆಯ ಮಾಜಿ ಅಧ್ಯಕ್ಷ ಅರೆಸ್ಟ್

Edited By:

Updated on: Nov 26, 2025 | 9:11 AM

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನೆರೆಮನೆಯಲ್ಲಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ. ಮರೀಗೌಡರನ್ನು ಪೊಲೀಸರು ಬಂಧಿಸಿದ್ದಾರೆ. 2000 ಮತ್ತು 2002ರಲ್ಲಿ ಮದ್ದೂರು ಪುರಸಭೆ ಅಧ್ಯಕ್ಷರಾಗಿದ್ದ ಈತ, ಜೂಜಾಟದ ಸಾಲ ತೀರಿಸಲು ಸುಶೀಲಮ್ಮ ಎಂಬುವರ ಮನೆಯಲ್ಲಿ ಮುಸುಕುಧಾರಿ ಕಳ್ಳತನ ನಡೆಸಿದ್ದ. ಸಿಸಿಟಿವಿ ಮತ್ತು ತನಿಖೆಯಿಂದ ಸತ್ಯಾಂಶ ಬಯಲಾಗಿದೆ.

ಮಂಡ್ಯ, ನವೆಂಬರ್ 26: ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿದ್ದ ಮನೆ ದರೋಡೆ ಪ್ರಕರಣ ಸಂಬಂದ ಮದ್ದೂರು ಪುರಸಭೆಯ ಮಾಜಿ ಅಧ್ಯಕ್ಷ ಎಂಕೆ ಮರೀಗೌಡ ಅವರನ್ನು ಪೊಲೀಸರು ಬಂಧಿಸಿದ್ದು ಸ್ಥಳೀಯರಲ್ಲಿ ಆಶ್ಚರ್ಯ ಮೂಡಿಸಿದೆ. ಆಗಸ್ಟ್ 26ರಂದು ಮದ್ದೂರಿನ ದೊಡ್ಡಿ ಬೀದಿಯಲ್ಲಿ ‘ಗ್ಯಾಸ್ ಚಂದ್ರು’ ಎಂಬವರ ಮನೆಗೆ ಮುಸುಕುಧಾರಿಯಾಗಿ ನುಗ್ಗಿ ಮರೀಗೌಡ ದರೋಡೆ ನಡೆಸಿದ್ದ ಎಂಬುದು ತನಿಖೆಯಿಂದ ಬಹಿರಂಗವಾಗಿದೆ. ಮನೆಯಲ್ಲಿದ್ದ ಚಂದ್ರು ಅವರ ಪತ್ನಿ ಸುಶೀಲಮ್ಮ ಅವರನ್ನು ಬೆದರಿಸಿ ಸುಮಾರು 50 ಗ್ರಾಂ ಚಿನ್ನಾಭರಣ ಮತ್ತು ವಜ್ರದ ಅರಳಿನ ಓಲೆ ಕಳವು ಮಾಡಿದ್ದ. ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮದ್ದೂರು ಠಾಣೆಯ ಪೊಲೀಸರು ಮರೀಗೌಡನನ್ನು ಗುರುತುಹಚ್ಚಿ ಬಂಧಿಸಿದ್ದಾರೆ. ಕಳವು ಮಾಡಿದ ಆಭರಣಗಳನ್ನು ಆರೋಪಿ ಗಿರವಿಗೆ ಇಟ್ಟಿರುವುದೂ ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರು ದರೋಡೆ ಮಾಡಿದ ಒಡವೆಗಳನ್ನು ಜಪ್ತಿ ಮಾಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ