ನೋಡ ನೋಡ್ತಿದ್ದಂತೆಯೇ ಹೃದಯಾಘಾತದಿಂದ ಕುಸಿದುಬಿದ್ದು ವ್ಯಕ್ತಿ ಸಾವು: ಸಿಸಿಟಿವಿಲಿ ಸೆರೆಯಾಯ್ತು ಆಘಾತಕಾರಿ ದೃಶ್ಯ
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಮನಕಲಕುವಂಥ ಘಟನೆಯೊಂದು ನಡೆದಿದ್ದು, ಪೈಂಟ್ ತರಲೆಂದು ಅಂಗಡಿಗೆ ಹೋದ ವ್ಯಕ್ತಿಯೊಬ್ಬರು ಹಾರ್ಟ್ ಅಟ್ಯಾಕ್ನಿಂದ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಾವನ್ನಪ್ಪಿರುವ ವ್ಯಕ್ತಿಯನ್ನು ಹುಲ್ಲಾಗಾಲ ಗ್ರಾಮದ ಈರಣ್ಣಯ್ಯ (58) ಎಂದು ಗುರುತಿಸಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಡಿಯೋ ಇಲ್ಲಿದೆ.
ಮಂಡ್ಯ, ನವೆಂಬರ್ 22: ಪೈಂಟ್ ತರಲೆಂದು ಅಂಗಡಿಗೆ ಹೋದ ವ್ಯಕ್ತಿ ಹೃದಯಾಘಾತಕ್ಕೆ ಒಳಗಾಗಿ ಏಕಾಏಕಿ ಕುಸಿದುಬಿದ್ದು ಅಸುನೀಗಿದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ನಡೆದಿದೆ. ಹುಲ್ಲಾಗಾಲ ಗ್ರಾಮದ ಈರಣ್ಣಯ್ಯ (58) ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದು, ಘಟನೆಯ ದೃಶ್ಯ ಅಂಗಡಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅಂಗಡಿ ಮಾಲೀಕ ಮೇಲೆತ್ತುವಷ್ಟರಲ್ಲಿ ಈರಣ್ಣಯ್ಯ ಅಸುನೀಗಿದ್ದಾರೆ.