AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಎಲ್ ರಾಹುಲ್ ಮಾಡಿದ ತಪ್ಪಿನಿಂದಾಗಿ ಸೌತ್ ಆಫ್ರಿಕಾ ತಂಡಕ್ಕೆ 26 ರನ್​ಗಳ ಸೇರ್ಪಡೆ

ಕೆಎಲ್ ರಾಹುಲ್ ಮಾಡಿದ ತಪ್ಪಿನಿಂದಾಗಿ ಸೌತ್ ಆಫ್ರಿಕಾ ತಂಡಕ್ಕೆ 26 ರನ್​ಗಳ ಸೇರ್ಪಡೆ

ಝಾಹಿರ್ ಯೂಸುಫ್
|

Updated on: Nov 22, 2025 | 5:10 PM

Share

India vs South Africa, 2nd Test: ಈ ಕ್ಯಾಚ್​ ಅನ್ನು ಕೈಚೆಲ್ಲಿದ್ದು ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾಯಿತು. ಏಕೆಂದರೆ ಈ ವೇಳೆ ಕೇವಲ 12 ರನ್ ಬಾರಿಸಿದ್ದ ಮಾರ್ಕ್ರಾಮ್ ಆ ಬಳಿಕ 26 ರನ್​ಗಳ ಕೊಡುಗೆ ನೀಡಿದರು. ಅಲ್ಲದೆ ರಯಾನ್ ರಿಕೆಲ್ಟನ್ ಜೊತೆಗೂಡಿ ಮೊದಲ ವಿಕೆಟ್​ಗೆ 82 ರನ್​ಗಳ ಜೊತೆಯಾಟವಾಡಿದರು.

ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಭರ್ಜರಿ ಆರಂಭ ಪಡೆದುಕೊಂಡಿದೆ. ಹೀಗೆ ಉತ್ತಮ ಆರಂಭ ಪಡೆಯಲು ಕೆಎಲ್ ರಾಹುಲ್ ಮಾಡಿದ ಎಡವಟ್ಟು ಕೂಡ ಕಾರಣ. ಜಸ್​ಪ್ರೀತ್ ಬುಮ್ರಾ ಎಸೆದ ಪಂದ್ಯದ 7ನೇ ಓವರ್​ನ 2ನೇ ಎಸೆತದಲ್ಲಿ ಐಡೆನ್ ಮಾರ್ಕ್ರಾಮ್ ಸ್ಲಿಪ್​ನಲ್ಲಿ ಸುಲಭ ಕ್ಯಾಚ್ ನೀಡಿದ್ದರು.

ಆದರೆ ಈ ಕ್ಯಾಚ್​ ಅನ್ನು ಕೈಚೆಲ್ಲಿದ್ದು ಟೀಮ್ ಇಂಡಿಯಾ ಪಾಲಿಗೆ ದುಬಾರಿಯಾಯಿತು. ಏಕೆಂದರೆ ಈ ವೇಳೆ ಕೇವಲ 12 ರನ್ ಬಾರಿಸಿದ್ದ ಮಾರ್ಕ್ರಾಮ್ ಆ ಬಳಿಕ 26 ರನ್​ಗಳ ಕೊಡುಗೆ ನೀಡಿದರು. ಅಲ್ಲದೆ ರಯಾನ್ ರಿಕೆಲ್ಟನ್ ಜೊತೆಗೂಡಿ ಮೊದಲ ವಿಕೆಟ್​ಗೆ 82 ರನ್​ಗಳ ಜೊತೆಯಾಟವಾಡಿದರು.

ಈ ಜೊತೆಯಾಟದೊಂದಿಗೆ ಉತ್ತಮ ಆರಂಭವನ್ನು ತನ್ನದಾಗಿಸಿಕೊಂಡ ಸೌತ್ ಆಫ್ರಿಕಾ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 247 ರನ್ ಕಲೆಹಾಕಿದೆ.

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್, ರಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್

ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

 

 

 

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More