Ravikumar Gowda Ganiga: ಮಂಡ್ಯ ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ ಗಾಣಿಗ ವಿಧಾನಸೌಧಕ್ಕೆ ಆಗಮಿಸಿದ್ದು ಕಬ್ಬು ತುಂಬಿದ ಎತ್ತಿನಗಾಡಿಯಲ್ಲಿ!
ಹೆಗಲ ಮೇಲೆ ರೈತರ ನಿಶಾನಿ ಹಸಿರು ವಸ್ತ್ರವನ್ನು ಹೊದ್ದು ತಮ್ಮ ಕೆಲ ಸಂಗಡಿಗರೊಂದಿಗೆ ರವಿಕುಮಾರ್ ಗೌಡ ಗಾಣಿಗ ವಿಧಾನಸೌಧಕ್ಕೆ ಆಗಮಿಸಿದರು.
ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಧುರೀಣ ರವಿಕುಮಾರ್ ಗೌಡ ಗಾಣಿಗ (Ravikumar Gowda Ganiga) 16ನೇ ವಿಧಾನ ಸಭೆ ಅಧಿವೇಶನದ (Assembly Session) ಮೊದಲ ದಿನವೇ ಗಮನ ಸೆಳೆದರು, ಅವರು ಆಧಿವೇಶನಕ್ಕೆ ಆಗಮಿಸಿದ್ದು ಎತ್ತಿನಗಾಡಿಯಲ್ಲಿ (bullock cart). ಬಂಡಿಯಲ್ಲಿ ಕಬ್ಬುಗಳನ್ನು ಇಟ್ಟುಕೊಂಡು, ಹೆಗಲ ಮೇಲೆ ರೈತರ ನಿಶಾನಿ ಹಸಿರು ವಸ್ತ್ರವನ್ನು ಹೊದ್ದು ತಮ್ಮ ಕೆಲ ಸಂಗಡಿಗರೊಂದಿಗೆ ರವಿಕುಮಾರ್ ಗೌಡ ಗಾಣಿಗ ವಿಧಾನಸಭೆಗೆ ಆಗಮಿಸಿದರು. ಎತ್ತಿನ ಗಾಡಿಯಲ್ಲಿ ಅವರು ಮಂಡ್ಯದಿಂದ ಹೊರಟಿದ್ದು ಯಾವಾಗ ಅಂತ ಗೊತ್ತಾಗಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos