ಮಂಡ್ಯದ ಜನ ದಡ್ಡರು, ಬಳೆತೊಟ್ಟವರು ಎಂದ ಮಾಜಿ ಸಂಸದ ಎಲ್​​ಆರ್ ಶಿವರಾಮೇಗೌಡ

ಅರುಣ್​ ಕುಮಾರ್​ ಬೆಳ್ಳಿ

Updated on: Oct 26, 2024 | 11:27 AM

ಕುಮಾರಸ್ವಾಮಿ ಉದ್ದೇಶಪೂರ್ವಕವಾಗಿ ಸಿಪಿ ಯೋಗೇಶ್ವರ್​ಗೆ ಚನ್ನಪಟ್ಟಣ ಉಪ ಚುನಾವಣೆಗೆ ಟಿಕೆಟ್ ತಪ್ಪಿಸಿದರು ಎಂದು ಹೇಳಿದ ಶಿವರಾಮೇಗೌಡ, ಸಿಪಿವೈಗೆ ಜೆಡಿಎಸ್ ಟಿಕೆಟ್ ಆಫರ್ ಮಾಡುವ ಬದಲು ಅವರನ್ನು ಬಿಜೆಪಿಯಿಂದಲೇ ಸ್ಪರ್ಧಿಸಲು ಹೇಳಿ ಡಾ ಸಿಎನ್ ಮಂಜುನಾಥ್ ಅವರನ್ನು ಗೆಲ್ಲಿಸಿದಂತೆ ಗೆಲ್ಲಿಸಬೇಕಿತ್ತು ಅಂತ ಹೇಳಿದರು.

ಮಂಡ್ಯ: ಮಾಜಿ ಸಂಸದ ಎಲ್ ಅರ್ ಶಿವರಾಮೇಗೌಡಗೆ ಬಾಯಿ ಭದ್ರವಿಲ್ಲ. ಇವತ್ತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು ಮಂಡ್ಯ ಜಿಲ್ಲೆಯ ಜನ ದಡ್ಡರು, ಬಳೆತೊಟ್ಟವರು ಎಂದು ಹೀಯಾಳಿಸಿದರು. ಶಿವರಾಮೇಗೌಡನಿಗೆ ಹೆಚ್ ಡಿ ಕುಮಾರಸ್ವಾಮಿ ಮೇಲೆ ದ್ವೇಷವಿದೆ ಅದರೆ ಅದನ್ನು ಬಾಯಿಚಪಲದ ಮೂಲಕ ತೀರಿಸಿಜೊಳ್ಳುವ ಭರದಲ್ಲಿ ಅವರು ಮಂಡ್ಯದ ಜನರ ಬಗ್ಗೆ ಕೇವಲವಾಗಿ ಮಾತಾಡಿದ್ದು ಸರಿಕಾಣಲಿಲ್ಲ. ಅವರ ಆಕ್ಷೇಪಣೆಯೆಂದರೆ, ಕುಮಾರಸ್ವಾಮಿ ಬೇರೆ ಜಿಲ್ಲೆಯವರು, ಮಂಡ್ಯದಿಂದ ಯಾಕೆ ಸ್ಪರ್ಧಿಸಬೇಕು ಅನ್ನೋದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಿಜೆಪಿ ನಾಯಕ ಎಲ್​​ಆರ್​ ಶಿವರಾಮೇಗೌಡಗೆ ಬಂಧನ ಭೀತಿ: ಜಾಮೀನಿಗಾಗಿ ಕೋರ್ಟ್​ ಮೆಟ್ಟಿಲೇರಿದ ಮಾಜಿ ಎಂಪಿ

Published on: Oct 26, 2024 10:30 AM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.