ವಿದ್ಯುತ್ ಶಾಕ್​ನಿಂದ ಮೃತಪಟ್ಟ ಕೋತಿಗೆ ವಿಧಿ ವಿಧಾನದಲ್ಲೇ ತಿಥಿ ಮಾಡಿದ ಗ್ರಾಮಸ್ಥರು; ಇಲ್ಲಿದೆ ವಿಡಿಯೋ

Edited By: ಕಿರಣ್ ಹನುಮಂತ್​ ಮಾದಾರ್

Updated on: Oct 06, 2023 | 9:09 PM

ವಿದ್ಯುತ್ ಶಾಕ್​ನಿಂದ ಮರಣವೊಂದಿದ್ದ ಕೋತಿಯ (Monkey) ಹನ್ನೊಂದನೇ ದಿನದ ತಿಥಿಕಾರ್ಯವನ್ನು ಗ್ರಾಮಸ್ಥರೆಲ್ಲರೂ ಸೇರಿ ನೆರವೇರಿಸಿರುವ ಘಟನೆ ಮಂಡ್ಯ(Mandya)ಜಿಲ್ಲೆಯ ಪಾಂಡವಪುರ ತಾಲೂಕಿನ ದೊಡ್ಡಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಂಡ್ಯ, ಅ.06: ವಿದ್ಯುತ್ ಶಾಕ್​ನಿಂದ ಮರಣವೊಂದಿದ್ದ ಕೋತಿಯ (Monkey) ಹನ್ನೊಂದನೇ ದಿನದ ತಿಥಿಕಾರ್ಯವನ್ನು ಗ್ರಾಮಸ್ಥರೆಲ್ಲರೂ ಸೇರಿ ನೆರವೇರಿಸಿರುವ ಘಟನೆ ಮಂಡ್ಯ(Mandya)ಜಿಲ್ಲೆಯ ಪಾಂಡವಪುರ ತಾಲೂಕಿನ ದೊಡ್ಡಭೋಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು, ಮನುಷ್ಯರು ಮೃತರಾದಾಗ ಹೇಗೆ ವಿಧಿ ವಿಧಾನಗಳೊಂದಿಗೆ ತಿಥಿ ಕಾರ್ಯಕ್ರಮವನ್ನು ನೆರವೇರಿಸುತ್ತವೆಯೋ ಅದೇ ರೀತಿ ಮಂಗನ ತಿಥಿ ಕಾರ್ಯದಲ್ಲೂ ವಿವಿಧ ಬಗೆಯ ತಿನಿಸುಗಳನ್ನು ಇಟ್ಟು ಗ್ರಾಮಸ್ಥರು ಪೂಜೆ ನೆರವೇರಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us
ಪ್ರಶಾಂತ್​ ಬಿ.

ಊರು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು. ರೈತಾಪಿ ಕುಟುಂಬದಿಂದ ಬಂದ ನಾನು, ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಎಂ ಎ ಪದವಿ ಪಡೆದು, ಆನಂತರ ಒಂದು ವರ್ಷಗಳ ಕಾಲ ಶಿವಮೊಗ್ಗದಲ್ಲಿ ಕೆಲ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಕಳೆದ ಹದಿಮೂರು ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಒಂದು ವರ್ಷಗಳ ಕಾಲ ಹುಬ್ಬಳ್ಳಿ ವರದಿಗಾರನಾಗಿ, ಆನಂತರ ರಾಮನಗರ ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ಮಾಡಿದ್ದು, ಪ್ರಸ್ತುತ ಮಂಡ್ಯ ಜಿಲ್ಲೆಯ ಹಿರಿಯ ವರದಿಗಾಗಿನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪೇಪರ್ ಹಾಗೂ ಬುಕ್ಸ್ ಗಳನ್ನ ಓದೋದು, ಕ್ರಿಕೆಟ್ ಆಡೊ ಹವ್ಯಾಸ ಇದೆ.

Read More