Shocking video: ಆ ಶಾಲೆಯ ವಿದ್ಯಾರ್ಥಿನಿಯರಿಗೆ ವಿಚಿತ್ರ ಕಾಯಿಲೆ.. ನೂರಾರು ಹೆಣ್ಣುಮಕ್ಕಳಿಗೆ ನಡೆಯಲು ಸಾಧ್ಯವಾಗುತ್ತಿಲ್ಲ, ವೈರಲ್ ಆಗುತ್ತಿದೆ ಆ ವಿಡಿಯೋ
ಕೀನ್ಯಾದಲ್ಲಿ ನಿಗೂಢ ಕಾಯಿಲೆಯೊಂದು ಶಾಲಾ ಮಕ್ಕಳನ್ನು ಪಾರ್ಶ್ವವಾಯುವಿಗೆ ತಳ್ಳಿದೆ, ನೂರಾರು ಬಾಲಕಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಬಾಧಿತ ಬಾಲಕಿಯರ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಆರೋಗ್ಯ ಅಧಿಕಾರಿಗಳು ಸಂಗ್ರಹಿಸಿ ಕೀನ್ಯಾ ವೈದ್ಯಕೀಯ ಸಂಶೋಧನಾ ಸಂಸ್ಥೆ (ಕೆಇಎಂಆರ್‌ಐ) ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ.
ಕೀನ್ಯಾದಲ್ಲಿ ನಿಗೂಢ ಕಾಯಿಲೆಯೊಂದು ಶಾಲಾ ಮಕ್ಕಳನ್ನು (school children) ಪಾರ್ಶ್ವವಾಯುವಿಗೆ ತಳ್ಳಿದೆ, ನೂರಾರು ಬಾಲಕಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಬಾಧಿತ ಬಾಲಕಿಯರ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಆರೋಗ್ಯ ಅಧಿಕಾರಿಗಳು ಸಂಗ್ರಹಿಸಿ ಕೀನ್ಯಾ ವೈದ್ಯಕೀಯ ಸಂಶೋಧನಾ ಸಂಸ್ಥೆ (ಕೆಇಎಂಆರ್‌ಐ -Kenya Medical Research Institute -KEMRI) ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ. ಹೌದು ಕೀನ್ಯಾ ಶಾಲಾ ಮಕ್ಕಳು ಕಾಲುಗಳಲ್ಲಿ ಪಾರ್ಶ್ವವಾಯು ರೋಗಲಕ್ಷಣಗಳನ್ನು (school children) ಹೊಂದಿದ್ದಾರೆ. ಅವರಲ್ಲಿ ಹೆಚ್ಚಿನವರು ನಡೆಯಲು ಸಾಧ್ಯವಾಗದಿರುವಂತಹ ನಿಗೂಢ ಕಾಯಿಲೆಯು ಕೀನ್ಯಾವನ್ನು ಆವರಿಸಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಕಾಕಮೆಗಾ ಪಟ್ಟಣದ ಸೇಂಟ್ ಥೆರೆಸಾಸ್ ಎರೇಗಿ ಬಾಲಕಿಯರ ಪ್ರೌಢಶಾಲೆಯ ಶಾಲಾ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯಕ್ಕೆ ಶಾಲೆಯನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ. ಮೊನ್ನೆ ಬುಧವಾರ, ಕೌಂಟಿ ಶಿಕ್ಷಣ ಅಧಿಕಾರಿ ಬೋನ್‌ಫೇಸ್ ಒಕೋತ್ ಮಾಧ್ಯಮಗಳಿಗೆ 95 ವಿದ್ಯಾರ್ಥಿಗಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
BBC ವರದಿಯ ಪ್ರಕಾರ, ಶಾಲಾ ಹುಡುಗಿಯರು ನಡೆಯಲು ಕಷ್ಟಪಡುತ್ತಿದ್ದರು, ಅವರ ಕಾಲುಗಳಲ್ಲಿ ಪಾರ್ಶ್ವವಾಯು ಮತ್ತು ಸೆಳೆತವನ್ನು ಅನುಭವಿಸಿದರು. ಅನಾರೋಗ್ಯದ ನಿಖರವಾದ ಸ್ವರೂಪವನ್ನು ಬಹಿರಂಗಪಡಿಸಿಲ್ಲವಾದರೂ, ಇದು ಸಾಮೂಹಿಕ ಹಿಸ್ಟೀರಿಯಾ ಎಂದು ತಜ್ಞರು ಹೇಳುತ್ತಾರೆ. ಬಾಧಿತ ಬಾಲಕಿಯರ ರಕ್ತ ಮತ್ತು ಮೂತ್ರದ ಮಾದರಿಗಳನ್ನು ಆರೋಗ್ಯ ಅಧಿಕಾರಿಗಳು ಸಂಗ್ರಹಿಸಿದ್ದಾರೆ ಮತ್ತು ನಿಗೂಢ ಕಾಯಿಲೆಯನ್ನು ಪರೀಕ್ಷಿಸುತ್ತಿರುವ ಕೀನ್ಯಾ ವೈದ್ಯಕೀಯ ಸಂಶೋಧನಾ ಸಂಸ್ಥೆ (ಕೆಇಎಂಆರ್‌ಐ) ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
Mysterious illness breaks out at Eregi Girls School in Kenya as more than 90 students struggle to walk ________ Womanizing ShopRite NYSC Minne Kariuki Mmesoma Priscilla Sheldon #FeelVideo Arise TV Naira Marley Kemi Adeosun pic.twitter.com/ePHhQ6g5l6
— GWG (@gwg_ng) October 4, 2023
ನಿಗೂಢ ಕಾಯಿಲೆಯಿಂದ ಶಾಲಾ ಮಕ್ಕಳು ನಡೆಯಲು ಸಾಧ್ಯವಾಗದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಎಕ್ಸ್ (ಟ್ವಿಟ್ಟರ್) ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರೊಬ್ಬರು ಹೀಗೆ ಪೋಸ್ಟ್ ಮಾಡಿದ್ದಾರೆ: “ಕೀನ್ಯಾದಲ್ಲಿ – ನಿಗೂಢ ಅನಾರೋಗ್ಯದ ಕಾರಣ ಹಲವಾರು ಶಾಲಾ ಬಾಲಕಿಯರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್ಚಿನ ವಿದ್ಯಾರ್ಥಿನಿಯರು ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಮತ್ತು ಅವರಿಗೆಲ್ಲ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ವರದಿಗಳು ಸೂಚಿಸುತ್ತವೆ.
ಏತನ್ಮಧ್ಯೆ, ಪರಿಸ್ಥಿತಿಯನ್ನು ನಿರ್ಣಯಿಸಿದ ನಂತರ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಂಡ ನಂತರ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕಳಿಸಲಾಗುವುದು ಎಂದು ಮಾಧ್ಯಮ ವರದಿ ಮಾಡಿದೆ. ಕೀನ್ಯಾ ಅಧಿಕಾರಿಗಳು ತಮ್ಮ ಮಕ್ಕಳ ಆರೋಗ್ಯವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವಂತೆ ಬಾಧಿತ ವಿದ್ಯಾರ್ಥಿಗಳ ಪೋಷಕರನ್ನು ಒತ್ತಾಯಿಸಿರುವುದಾಗಿ ವರದಿಯಾಗಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Fri, 6 October 23