AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣು ಬಾಂಬ್‌ಗಿಂತ 24 ಪಟ್ಟು ಹೆಚ್ಚು ಶಕ್ತಿಯ, 450 ಕೋಟಿ ವರ್ಷದ ಬೆನ್ನೂ ಕ್ಷುದ್ರಗ್ರಹ, 46 ಕೋಟಿ ಮೈಲು ದೂರದಲ್ಲಿ ಭೂಮಿಗೆ ಸದ್ಯದಲ್ಲೇ ಡಿಕ್ಕಿ ಹೊಡೆಯಲಿದೆ- ನಾಸಾ ವಿಜ್ಞಾನಿಗಳು

Bennu asteroid: ಅಣು ಬಾಂಬ್‌ಗಿಂತ 24ಪಟ್ಟು ಹೆಚ್ಚಿನ ಶಕ್ತಿಯ -450 ಕೋಟಿ ವರ್ಷದ ಬೆನ್ನೂ ಕ್ಷುದ್ರಗ್ರಹ 46 ಕೋಟಿ ಮೈಲು ದೂರದಲ್ಲಿ ಭೂಮಿಗೆ ಸದ್ಯದಲ್ಲೇ ಡಿಕ್ಕಿ ಹೊಡೆಯಲಿದೆ ಎನ್ನುತ್ತಿದ್ದಾರೆ ನಾಸಾ ವಿಜ್ಞಾನಿಗಳು. ಹಾಗಾದರೆ ಯಾವಾಗ ಅದು ಘಟಿಸುತ್ತದೆ ಮತ್ತು ಅದರ ಪರಿಣಾಮ ಏನೇನು?

ಅಣು ಬಾಂಬ್‌ಗಿಂತ 24 ಪಟ್ಟು ಹೆಚ್ಚು ಶಕ್ತಿಯ, 450 ಕೋಟಿ ವರ್ಷದ ಬೆನ್ನೂ ಕ್ಷುದ್ರಗ್ರಹ, 46 ಕೋಟಿ ಮೈಲು ದೂರದಲ್ಲಿ ಭೂಮಿಗೆ ಸದ್ಯದಲ್ಲೇ ಡಿಕ್ಕಿ ಹೊಡೆಯಲಿದೆ- ನಾಸಾ ವಿಜ್ಞಾನಿಗಳು
ಭೂಮಿಯೆಡೆಗೆ ಧಾವಿಸುತ್ತಿದೆ ಭಾರೀ ಕ್ಷುದ್ರಗ್ರಹ! ಯಾವಾಗ ಢೀ ಹೊಡೆಯುತ್ತದೆ ಅಂದ್ರೆ...
ಸಾಧು ಶ್ರೀನಾಥ್​
|

Updated on:Oct 05, 2023 | 6:28 PM

Share

ಬಾಹ್ಯಾಕಾಶದಲ್ಲಿ ನಿತ್ಯ ಅನೇಕ ಕ್ಷುದ್ರಗ್ರಹಗಳು ವಾಯು ವೇಗದಲ್ಲಿ ಸಂಚಲನಗೊಳ್ಳುತ್ತಿರುತ್ತವೆ. ಒಂದು ನಿರ್ದಿಷ್ಟ ಕಕ್ಷೆಯಲ್ಲಿ ಅತ್ಯಂತ ವೇಗದಿಂದ ಈ ಕ್ಷುದ್ರಗ್ರಹಗಳು ಪರಿಭ್ರಮಿಸುತ್ತಿರುತ್ತವೆ. ಆದಾಗ್ಯೂ ಇವುಗಳಲ್ಲಿ ಅನೇಕವು ಗೊತ್ತುಗುರಿ ಇಲ್ಲದೆ, ಒಂದು ನಿರ್ದಿಷ್ಟ ಕಕ್ಷೆಯೂ ಇಲ್ಲದೆ ಚಕ್ಕರ್ ಹೊಡೆಯುತಿರುತ್ತವೆ. ಅದೂ ಸಾಲದು ಅಂತಾ ಭೂಮಿಯತ್ತಲೂ ನುಸುಳಿ, ಅಪಾಯ ತಂದಿಡುವುದುಂಟು. ಇತ್ತೀಚಿಗೆ ಇದೇ ರೀತಿ ದಿಕ್ಕುತಪ್ಪಿದ ಒಂದು ಕ್ಷುದ್ರಗ್ರಹವನ್ನು ನಾಸಾ ವಿಜ್ಞಾನಿಗಳು ಗುರುತಿಸಿದ್ದಾರೆ.

ನಾಸಾ ಸಂಶೋಧಕರು ಹೇಳುವ ವಿವರಗಳ ಪ್ರಕಾರ.. ಈ ಕ್ಷುದ್ರಗ್ರಹ ಏಕವಾಗಿ 1610 ಅಡಿ ಅಗಲವಿದೆ ಎಂದು ಸೂಚಿಸಿದ್ದಾರೆ. ಈ ಬೃಹತ್ ಕ್ಷುದ್ರಗ್ರಹ ಅತ್ಯಂತ ವೇಗವಾಗಿ ಭೂಮಿಗೆ ಡಿಕ್ಕಿ ಹೊಡೆಯಲು ಧಾವಿಸಿಬರುತ್ತಿದೆ. ಇದನ್ನು ಬೆನ್ನೂ ಕ್ಷುದ್ರಗ್ರಹ (Bennu Asteroid) ನಾಮಕರಣ ಮಾಡಲಾಗಿದೆ. ಆದರೂ ಕ್ಷುದ್ರಗ್ರಹದಿಂದ ಭೂಮಿಗೆ ಯಾವುದೇ ರೀತಿಯ ಆತಂಕ, ಅಪಾಯ ಇಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸುಮಾರು 159 ವರ್ಷದ ನಂತರ ಇಂತಹ ಕ್ಷುದ್ರಗ್ರಹವೊಂದು ಭೂಮಿಗೆ ಬಲವಾಗಿ ಡಿಕ್ಕಿ ಹೊಡೆದು ಹೋಗಲಿದೆ ಎಂದು ಅವರು ದೃಢಪಡಿಸಿದರು. ಈ ಕ್ಷುದ್ರಗ್ರಹvನ್ನು 1999 ರಲ್ಲಿ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ನಾಸಾಗೆ ಓ ಸಿರೀಸ್ ರೆಕ್ಸ್ ಸೈನ್ಸ್ ಸದಸ್ಯರು ಈ ಕ್ಷುದ್ರಗ್ರಹವನ್ನು 1999 ರಲ್ಲಿ ಗುರುತಿಸಿದ್ದಾರೆ. ಆದಾಗ್ಯೂ ಈ ಕ್ಷುದ್ರಗ್ರಹ ಪ್ರಸ್ತುತ ಭೂ ಕಕ್ಷೆಯ ಮಾರ್ಗದಲ್ಲಿ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಒಂದು ವೇಳೆ ಈ ಕ್ಷುದ್ರಗ್ರಹ ಭೂಮಿಗೆ ಢೀ ಕೊಟ್ಟರೆ 1200 ಮೆಗಾ ಟನ್ ಶಕ್ತಿಯು ಬಿಡುಗಡೆಯಾಗುವ ಅಂದಾಜಿದೆ. ಅಂದರೆ ಪ್ರಸ್ತುತ ಇರುವ ದೊಡ್ಡ ಅಣು ಬಾಂಬ್‌ಗಿಂತ 24 ಪಟ್ಟು ಹೆಚ್ಚಿನ ಶಕ್ತಿ ಬಿಡುಗಡೆಯಾಗುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

Also Read: ಭೂಮಿಯ ಕಡೆಗೆ ನುಗ್ಗುತ್ತಿರುವ 170 ಅಡಿ ಭಯಾನಕ ಕ್ಷುದ್ರಗ್ರಹ; ಇಂದೇ ತಲುಪಲಿದೆ ಎನ್ನುತ್ತಿದೆ ನಾಸಾ

ಅದೇನೇ ಆದರೂ ಈ ಕ್ಷುದ್ರಗ್ರಹ ನಿಖರವಾಗಿ ಭೂಮಿಗೆ ಢೀ ಕೊಡುವ ಅವಕಾಶಗಳು ಇಲ್ಲವೆಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಪರಿಶೋಧಕರ ಅಭಿಪ್ರಾಯದ ಪ್ರಕಾರ ಈ ಕ್ಷುದ್ರಗ್ರಹ ಭೂಮಿಗೆ ಢೀ ಹೊಡೆಯುವ ಅವಕಾಶ ಗುರುತ್ವಾಕರ್ಷಣ ಮಾರ್ಗದಿಂದಾಗಿ ಅವಕಾಶ ಬಹಳ ಕಡಿಮೆ ಇದೆ ನಾಸಾ ವಿಜ್ಞಾನಿಗಳು ಲೆಕ್ಕಹಾಕಿದ್ದಾರೆ. ಇದು ಭೂಮಿಗೆ ಹತ್ತಿರ ಬರುವುದು ಅಂದರೆ 46.5 ಕೋಟಿ ಮೈಲು ದೂರದಲ್ಲಿ ಇದು ಭೂಮಿಯತ್ತ ಹಾದುಹೋಗಲಿದೆ ಎಂದು ಹೇಳಲಾಗಿದೆ.

ಅಸಲಿಗೆ ಈ ಕ್ಷುದ್ರಗ್ರಹ ಹೇಗೆ ರೂಪುಗೊಂಡಿತೆಂದರೆ

ಬೆನ್ನೂ ಕ್ಷುದ್ರಗ್ರಹ ಎಂಬುದು ಇಜ್ಜಿಲಿನಿಂದ ತಯಾರಾಗಿದೆಯಂತೆ. ಇದು ಸೌರ ವ್ಯವಸ್ಥೆ ರೂಪುಗೊಂಡ ಮೊದಲ ಕೋಟಿ ವರ್ಷಗಳ ಅವಧಿಯಲ್ಲಿ ರೂಪುಗೊಂಡಿತಂತೆ. ಹಾಗಾಗಿ ಇದರ ವಯೋಮಾನ ಸುಮಾರು 450 ಕೋಟಿ ವರ್ಷಗಳಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಈ Bennu Asteroid ಅನ್ನು ಗಮನಿಸಿದರೆ.. ಸೌರ ವ್ಯವಸ್ಥೆಯಲ್ಲಿ ಜೀವವು ಹೇಗೆ ರೂಪುಗೊಂಡಿದೆ ಎಂಬುದನ್ನು ತಿಳಿಯುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:27 pm, Thu, 5 October 23

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ