ಮಚ್ಚು ಹಿಡಿದು ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್​ಗೆ ಯುವಕ ರೀಲ್ಸ್: ಟ್ರೋಲ್ ಮಾಡಿದ ಪೊಲೀಸ್​

Edited By:

Updated on: Aug 31, 2025 | 11:04 AM

ಮಚ್ಚು ಹಿಡಿದು ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್​ಗೆ ರೀಲ್ಸ್ ಮಾಡಿದ್ದ ಯುವಕನನ್ನು ಮಂಡ್ಯ ಪೊಲೀಸರು ಪತ್ತೆ ಮಾಡಿ ಆತನಿಂದ ಕ್ಷೆಮೆ ಕೇಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಪಾಯಕಾರಿ ವಿಷಯಗಳನ್ನು ಹಂಚಿಕೊಳ್ಳುವುದರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪುಡಿರೌಡಿಗಳ ಮೇಲೆ ಖಾಕಿ ಹದ್ದಿನಕಣ್ಣಿಟ್ಟಿದೆ.

ಮಂಡ್ಯ, ಆಗಸ್ಟ್​ 31: ಮಚ್ಚು ಹಿಡಿದು ‘ಇದ್ರೆ ನೆಮ್ಮದಿಯಾಗ್ ಇರ್ಬೇಕ್’ ಸಾಂಗ್​​ಗೆ ರೀಲ್ಸ್​​ ಮಾಡಿದ್ದ ಯುವಕನನ್ನು ಮಂಡ್ಯ (Mandya) ಪೊಲೀಸರೇ ಟ್ರೋಲ್ ಮಾಡಿ ಎಚ್ಚರಿಕೆ ಕೊಟ್ಟಿದ್ದಾರೆ. ಮಂಡ್ಯದ ಕಾರಸವಾಡಿ ಗ್ರಾಮದ ಪವನ್ ಎಂಬಾತ ಮಚ್ಚು ಹಿಡಿದು ರೀಲ್ಸ್​ ಮಾಡಿದ್ದ. ಆತನನ್ನು ಪತ್ತೆ ಮಾಡಿದ ಪೊಲೀಸರು ಠಾಣೆ ಮುಂದೆ ನಿಲ್ಲಿಸಿ ಕ್ಷಮೆ ಕೇಳಿಸಿದ್ದಾರೆ. ಜೊತೆಗೆ ಮಾರಕಾಸ್ತ್ರ ಹಿಡಿದು ಫೋಸ್ ಕೊಡುವ ಪುಡಿರೌಡಿಗಳಿಗೆ ಖಡಕ್ ವಾರ್ನಿಂಗ್​ ಕೂಡ ಕೊಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.