ಪುನೀತ್ ಪುತ್ಥಳಿ ಅನಾವರಣದ ವೇಳೆ ಬಿಕ್ಕಿ ಬಿಕ್ಕಿ ಅತ್ತ ರಾಘವೇಂದ್ರ ರಾಜ್ಕುಮಾರ್ ಪತ್ನಿ ಮಂಗಳಾ
Puneeth Rajkumar Statue: ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡ ನೋವು ಎಂದಿಗೂ ಕೊನೆ ಆಗುವಂಥದ್ದಲ್ಲ. ಡಾ. ರಾಜ್ ಕುಟುಂಬದವರಿಗೆ ಪ್ರತಿ ಕ್ಷಣವೂ ಅಪ್ಪು ನೆನಪು ಕಾಡುತ್ತದೆ.
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Raghavendra Rajkumar) ಭೌತಿಕವಾಗಿ ನಮ್ಮೆಲ್ಲರನ್ನು ಅಗಲಿದ್ದರೂ ಕೂಡ ಅವರ ಮೇಲೆ ಜನರು ಇಟ್ಟಿರುವ ಅಭಿಮಾನ ಶಾಶ್ವತ. ಅಪ್ಪು ನೆನಪನ್ನು ಅಮರವಾಗಿಸುವ ಸಲುವಾಗಿ ಹೊಸಪೇಟೆಯಲ್ಲಿ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗಿದೆ. ಈ ಪುತ್ಥಳಿ (Puneeth Rajkumar Statue) ಅನಾವರಣದ ಕಾರ್ಯಕ್ರಮ ಅದ್ದೂರಿಯಾಗಿ ಭಾನುವಾರ (ಜೂನ್ 5) ನಡೆದಿದೆ. ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ರಾಘವೇಂದ್ರ ರಾಜ್ಕುಮಾರ್, ಅವರ ಪತ್ನಿ ಮಂಗಳಾ ಸೇರಿದಂತೆ ಡಾ. ರಾಜ್ ಕುಟುಂಬದ ಅನೇಕರು ಭಾಗಿಯಾದರು. ಈ ವೇಳೆ ಮಂಗಳಾ (Mangala Raghavendra Rajkumar) ಅವರು ತುಂಬ ಎಮೋಷನಲ್ ಆದರು. ಎಲ್ಲರ ಎದುರು ಅವರು ಬಿಕ್ಕಿ ಬಿಕ್ಕಿ ಅತ್ತರು. ಪುನೀತ್ ಇಲ್ಲ ಎಂಬ ನೋವು ಅವರ ಕುಟುಂಬದ ಸದಸ್ಯರಿಗೆ ಪ್ರತಿಕ್ಷಣ ಕಾಡುತ್ತಿದೆ. ಆದರೂ ಜೀವನ ಮುಂದೆ ಸಾಗಲೇಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.